ಶ್ರಿ ಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ಸಂಪನ್ನ

ಕೊಕ್ಕಡ: ಇಲ್ಲಿಯ ಶ್ರೀ ಸೌತಡ್ಕ ಶ್ರಿ ಮಹಾಗಣಪತಿ ದೇವಳದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆಯು ಜು.13 ರಂದು ಶ್ರೀ ಕ್ಷೇತ್ರದಲ್ಲಿ ಸಮಾಪನಗೊಂಡಿತು. ಕೇರಳದ ಪ್ರಸಿದ್ದ ಜ್ಯೋತಿಷಿ ಪ್ರಶ್ನಾ ಚಿಂತಕ ಶ್ರೀ ವಿಷ್ಣು ಪೂಚಕ್ಕಾಡು ಇವರ ನೇತೃತ್ವದಲ್ಲಿ ಜುಲೈ 11,12,13 ರವರೆಗೆ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಿತು.
ಶ್ರೀ ಕ್ಷೇತ್ರದ ವ್ಯವಸ್ಥಪನಾ ಸಮಿತಿಯ ಅಧ್ಯಕ್ಷ ಸುಬ್ರಹಣ್ಯ ಶಬರಾಯ, ಸದಸ್ಯರುಗಳಾದ ವಿಶ್ವನಾಥ ಕೊಲ್ಲಾಜೆ, ವಿಶ್ವನಾತ ಶೆಟ್ಟಿ, ಪ್ರಶಾಂತ ರೈ, ಅಣ್ಣಪ್ಪ ಗೌಡ, ಸಿನಿ ಗುರುದೇವನ್, ಸೌಮ್ಯ ಪಿ.ಕೆ, ಗಣೇಶ್, ಮುಖ್ಯ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಶ್ರೀ ಕ್ಷೇತ್ರದ ಊರಪರವೂರ ಭಕ್ತಾದಿಗಳು, ದೇವಳದ ಸಿಬ್ಬಂದಿಗಳು, ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.