HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶ್ರೀ ಧ.ಮಂ.ಪ.ಪೂ ಕಾಲೇಜು: ‘ಉತ್ತಮ ಲೇಖನ ಬರೆಯುವ ಕಲೆ’ ವಿಶೇಷ ಸಂವಾದ

ಉಜಿರೆ: ಉತ್ತಮ ಬರಹಗಾರರಾಗುವ ಮುನ್ನ ಉತ್ತಮ ಓದುಗರಾಗುವುದು ಅವಶ್ಯ. ನಾವು ಎಷ್ಟರ ಮಟ್ಟಿಗೆ ಸಾಹಿತ್ಯದಲ್ಲಿ ತೊಡಗಿಸುತ್ತೇವೆಯೋ ಅಷ್ಟರ ಮಟ್ಟಿಗೆ ಯಶಸ್ವಿ ಬರಹಗಾರರಾಲು ಸಾಧ್ಯ ಎಂದು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನದ ಪ್ರಾಧ್ಯಾಪಕ ಡಾ. ಪರಶುರಾಮ್ ಕಾಮತ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಅವರು ಉಜಿರೆಯ ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನ ವಾರ್ಷಿಕ ಸಂಚಿಕೆ ವಿಭಾಗವು ಆಯೋಜಿಸಿದ ‘ಉತ್ತಮ ಲೇಖನ ಬರೆಯುವ ಕಲೆ’ ಎಂಬ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಇಂದು ಯುವ ಜನತೆ ನವ ಮಾಧ್ಯಮಗಳ ಭರಾಟೆಗೆ ಬಲಿಬಿದ್ದು ಓದುವಿಕೆಯನ್ನು ಕಡಿಮೆ ಮಾಡುತ್ತಿವೆ. ಯಾವುದೇ ಬರಹಗಾರರು ಯಶಸ್ವಿಗೊಳ್ಳಬೇಕಾದರೆ ಮೊದಲಿಗೆ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಕಲೆಯನ್ನು ಹೊಂದಿರಬೇಕು. ಇದರಿಂದ ಬರಹದ ವಸ್ತು ಸಿಗುತ್ತದೆ ಪೂರಕ ವಿಷಯಗಳನ್ನು ಕಲೆಹಾಕಿ ಸ್ವಂತ ದೃಷ್ಟಿಯಿಂದ ಹೊಳಪಿನ ನಿರೂಪಣೆ ಶೈಲಿಯಿಂದ ಬರಹವನ್ನು ಬರೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್ ದಿನೇಶ್ ಚೌಟರವರು ವಹಿಸಿ ‘ಪ್ರಸ್ತುತ ಕಾಲದಲ್ಲಿ ವಿವಿಧ ಬಗೆಯ ಉತ್ತಮ ಬರಹಗಳಿಗೆ ಮಾಧ್ಯಮಗಳಲ್ಲಿ ಅವಕಾಶವಿದೆ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು
ವೇದಿಕೆಯಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆಯ ಸಂಪಾದಕರಾದ ಡಾ. ಪ್ರಸನ್ನ ಕುಮಾರ್ ಐತಾಳ್‌ರವರು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಸುಭಾಷ್ ರಾವ್ ಬೋಳೂರು ಸ್ವಾಗತಿಸಿ, ಸುದರ್ಶಿನಿ ಧನ್ಯವಾದ ಸಲ್ಲಿಸಿದರು. ಅಕ್ಷಯ್ ಭಟ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.