HomePage_Banner_
HomePage_Banner_
HomePage_Banner_

ಶ್ರೀ ಧ.ಮಂ.ಪ.ಪೂ ಕಾಲೇಜು : ಆಂಗ್ಲಭಾಷಾ ಸಂವಹನ ತರಗತಿಗಳ ಉದ್ಘಾಟನೆ

ಉಜಿರೆ: ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಸಂವಹನ ತರಗತಿಗಳ ಉದ್ಘಾಟನ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ಉದ್ಘಾಟನೆಯನ್ನು ಶ್ರೀ ಧ.ಮಂ.ಪದವಿ ಕಾಲೇಜು ಉಪನ್ಯಾಸಕ  ಪ್ರೊ. ಜಿ.ಆರ್ ಭಟ್ ನೆರವೇರಿಸಿ ಮಾತನಾಡಿ , ಪ್ರತೀ ಕ್ಷೇತ್ರದಲ್ಲೂ ಆಂಗ್ಲಭಾಷೆಯ ಉಪಯೋಗ ಬಹಳಷ್ಟಿದೆ. ಆಂಗ್ಲಭಾಷೆಯನ್ನು ‘ಗ್ಲೋಬಲ್ ಭಾಷೆ’ ಎಂದು ಪರಿಗಣಿಸಲಾಗಿದೆ ಹಾಗೂ ವಿದ್ಯಾರ್ಥಿಗಳು ಈ ತರಗತಿಗಳ ಉಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್ ದಿನೇಶ್ ಚೌಟರವರು ಆಂಗ್ಲಭಾಷೆಯ ಪ್ರಾಮುಖ್ಯತೆ ತಿಳಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಭಾಷೆಯಲ್ಲಿ ಪರಿಣಿತಿ ಪಡೆದುಕೊಳ್ಳುವಂತೆ ತಿಳಿಸಿದರು. ವಿಭಾಗದ ಮುಖ್ಯಸ್ಥೆ ಸೀಮಾ ಉಪಸ್ಥಿತರಿದ್ದು, ಈ ಸಂದರ್ಭದಲ್ಲಿ ವಿಭಾಗ ನಡೆಸಿದ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. ವಿಭಾಗದ ಉಪನ್ಯಾಸಕಿ ಸುಪ್ರೀತಾ ಸ್ವಾಗತಿಸಿ, ನಿಹಾರಿಕ ಜಿ.ಎನ್ ವಂದಿಸಿ, ಕು. ಪೂರ್ವಿ, ಡಿಂಪಲ್ ಮತ್ತು ಪ್ರೇರಣ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.