HomePage_Banner_
HomePage_Banner_
HomePage_Banner_

ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳಿಂದ ತಪ್ತಮುದ್ರಾಧಾರಣೆ

Advt_NewsUnder_1

ಉಜಿರೆ : ಆಷಾಢ ಮಾಸದ ಏಕಾದಶೀ ಪ್ರಥಮೈಕಾದಶಿಯಾಗಿ ಭಗವಂತ ಯೋಗನಿದ್ರೆಗೆ (ಶಯನೀ) ಸರಿಯುವ ಪರ್ವಕಾಲವಾಗಿ ವಿಶೇಷ ಮಹತ್ವ ಪಡೆದಿದೆ. ಅಂದು ಮೋಕ್ಷಕ್ಕೆ ಅಧಿಪತಿಯಾದ ಮಹಾವಿಷ್ಣುವಿನ ಲಾಂಛನವಾದ ಶಂಖ, ಚಕ್ರ ಮುದ್ರೆಯನ್ನು ಸುದರ್ಶನ ಹೋಮದಲ್ಲಿ ಅಭಿಮಂತ್ರಿಸಿ ಧಾರಣೆ ಮಾಡುವುದರಿಂದ ಮಹಾವಿಷ್ಣುವಿನ ಪೂರ್ಣಾನುಗ್ರಹಕ್ಕೆ ಪಾತ್ರರಾಗುವುದರೊಂದಿಗೆ ಸಮಸ್ತ ಪಾಪ ಪರಿಹಾರವಾಗುವುದು. ದೈಹಿಕ ಕಾಯಿಲೆಗಳಿಗೆ ನಿರೋಧಕ ಶಕ್ತಿ ಹೆಚ್ಚುವುದು. ಭಗವದ್ಭಕ್ತರಿಗೆ ಮಹಾವಿಷ್ಣು ಆರೋಗ್ಯ, ಸುಖ, ಶಾಂತಿ, ನೆಮ್ಮದಿ ಅನುಗ್ರಹಿಸಲಿ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ನುಡಿದರು.
ಅವರು ಜು. 12ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರ ನೇತೃತ್ವದಲ್ಲಿ ನಡೆದ ಪ್ರಥಮೈಕಾದಶೀ ತಪ್ತಮುದ್ರಾಧಾರಣೆಯಲ್ಲಿ 500ಕ್ಕೂ ಹೆಚ್ಚು ಭಕ್ತಾದಿಗಳಿಗೆ ಮುದ್ರಾಧಾರಣೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ವೇದಮೂರ್ತಿ ಶ್ರೀಪತಿ ಎಳಚಿತ್ತಾಯರು ಸುದರ್ಶನ ಹೋಮ ಧಾರ್ಮಿಖ ವಿಧಿ ನೆರವೇರಿಸಿ, ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಯ, ಉಜಿರೆ ವಲಯಾಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಮತ್ತು ಪರಾರಿ ವೆಂಕಟ್ರಮಣ ಹೆಬ್ಬಾರ್ ಮುದ್ರಾಧಾರಣೆಯ ವ್ಯವಸ್ಥೆ ಕಲ್ಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.