ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆಯು ಜು.10 ರಂದು ಸಮುದಾಯ ಭವನದಲ್ಲಿ ಯೋಗೀಶ ದಾಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ವರದಿ ಸಾಲಿನಲ್ಲಿ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಚಂದ್ರಾವತಿ (ಪ್ರಥಮ), ಧರ್ಮಪಾಲ (ದ್ವಿತಿಯ) ಇವರಿಗೆ ವಿಸ್ತರಾಣಾಧಿಕಾರಿ ಯಮುನಾ ಬಹುಮಾನವನ್ನು ವಿತರಿಸಿದರು.
ವರದಿ ಸಾಲಿನಲ್ಲಿ ವರ್ಷ ಪೂರ್ತಿ ಹಾಲು ನೀಡಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು. ತಾರಾ ಚಿಪಳೂಣಕರ್ ಮತ್ತು ಗಿರಿಜಾ ಕೆದಿಲ್ಲಾಯ ಸ್ವರಚಿಸಿದ ಹಾಡಿನಿಂದ ಪ್ರಾರ್ಥಿಸಿದರು. ಕಾರ್ಯದರ್ಶಿ ಲಕ್ಷ್ಮೀಶ.ಬಿ ಯವರು ವರದಿ ಸಾಲಿನ ಚಟುವಟಿಕೆಗಳ ವರದಿ, ಬಜೆಟ್ ಮಂಡನೆ, ಲಾಭ-ನಷ್ಟದ ವಿವರ ನೀಡಿದರು. 12 ಶೇಕಡಾ ಲಾಭಾಂಶವನ್ನು ಸದಸ್ಯರಿಗೆ ಹಂಚಲಾಯಿತು. ಸದಸ್ಯರಿಗೆ ಬೋನಸ್ ಹಂಚಿಕೆ ಮಾಡಲಾಯಿತು. ಪರಿಸರದ ಅರಿವಿಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ನಾಗಲಿಂಗ ಸದಸ್ಯರಿಗೆ ಸಸಿಗಳನ್ನು ವಿತರಿಸಿ ಅರಣ್ಯದ ಮಹತ್ವ, ಪರಿಸರ ಸಂರಕ್ಷಣೆ ಬಗ್ಗೆ ತಿಳಿಸಿದರು. ಸಂಘದ ನಿರ್ದೇಶಕರು ಸಭೆಯಲ್ಲಿ ಉಪಸ್ಥಿತರಿದ್ದರು.