ಬೆಳ್ತಂಗಡಿಯಲ್ಲಿ ವಿಶ್ವ ಇಎನ್‌ಟಿ ಕ್ಲಿನಿಕ್ ಶುಭಾರಂಭ

ಬೆಳ್ತಂಗಡಿ: ಇಲ್ಲಿಯ ಮೂರು ಮಾರ್ಗದ ಬಳಿಯ ಹನುಮಾನ್ ಕಾಂಪ್ಲೆಕ್ಸ್‌ನ 1ನೇ ಮಹಡಿಯಲ್ಲಿ ಕಿವಿ,ಮೂಗು,ಗಂಟಲು ತಜ್ಞರ ‘ವಿಶ್ವ ಇಎನ್‌ಟಿ ಕ್ಲಿನಿಕ್’ ಇಂದು(ಜು.11) ಶುಭಾರಂಭಗೊಂಡಿತು.


ಉಜಿರೆ ಶಕ್ತಿ ಕ್ಲಿನಿಕ್ ವೈದ್ಯ ಡಾ| ಪ್ರಕಾಶ್ ಬಿ ಯವರು ದೀಪಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಉಜಿರೆಯ ಜಯರಾಮ ಪಡ್ಡಿಲ್ಲಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಜಿರೆ ಎಸ್.ಪಿ ಆಯಿಲ್ ಮಿಲ್ ಮಾಲಕ ಶಿವಕಾಂತ ಗೌಡ, ಮಾಜಿ ಸೈನಿಕ ಸುನಿಲ್ ಶೆಣೈ, ಜನಾರ್ದನ ಪಡ್ಡಿಲ್ಲಾಯ ಉಜಿರೆ, ವಸಂತ ರಾವ್, ಜಗದೀಶ್ಚಂದ್ರ, ಸಂಜೀವ ಗೌಡ ಮಾಳಿಗೆ ಮನೆ, ಶೇಖರ ಗೌಡ, ಇಂದಿರಾ ಮಾಳಿಗೆ ಮನೆ, ಶಕುಂತಳಾ, ಪ್ರೇಮಾ ಇನ್ನಿತರರು ಹಾಜರಿದ್ದರು.
ಇಎನ್‌ಟಿ ತಜ್ಞ ಡಾ| ವಿಶ್ವವಿಜೇತ ಎಸ್.ಕೆ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.