HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಅನಾರೋಗ್ಯದಿಂದ ಉರುವಾಲಿನ ವಿಜೇತ್ ಶೆಟ್ಟಿ ನಿಧನ

ಉರುವಾಲು: ಇಲ್ಲಿಯ ನಾರಳಿಕೆ (ಧರ್ಮಾಡಿ) ನಿವಾಸಿ, ಕಲ್ಲೇರಿಯ ವಿಧಾಂತ್ ಸರ್ವಿಸ್ ಸ್ಟೇಷನ್ ಮಾಲಕ ವಿಜೇತ್ ಶೆಟ್ಟಿ(30.ವ)ಯವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಜು.11) ನಿಧನರಾದರು.
ಇವರು ಕೆಲದಿನಗಳಿಂದ ನ್ಯೂಮೋನಿಯಾ ಜ್ವರದಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದರು.
ಇವರು ಕುಪ್ಪೆಟ್ಟಿ ಒಂದನೇ ವಾರ್ಡಿನ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ತಂದೆ ನಾರಾಯಣ ಶೆಟ್ಟಿ, ತಾಯಿ ಅನಿತಾ, ಓರ್ವ ಸಹೋದರಿ ವಿದ್ಯಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.