ಬೆನ್ನು ಮೂಳೆ ಮುರಿದ ಕಾಯರ್ತಡ್ಕದ ರಮೇಶ್ ಗೌಡರ ಹಾಸಿಗೆ ಹಿಡಿದ ಬದುಕಿಗೆ ಈಗ 20 ವರ್ಷ

ಬದುಕು ದುಸ್ತರ; ಜನರ ಸಹಕಾರಕ್ಕೆ ಕಾತರ

ಕಳೆಂಜ: ಕಳೆಂಜ ಗ್ರಾಮದ ಕಾಯರ್ತಡ್ಕ ಕೆದಂಬೊಟ್ಟು ನಿವಾಸಿ ರಮೇಶ್ ಗೌಡ ಅವರು ಕೂಲಿ ಕೆಲಸಕ್ಕಾಗಿ ಪಕ್ಕದ ನಡುಜಾರು ಎಂಬಲ್ಲಿಗೆ ಹೋಗಿದ್ದವರು ಮರವೇರಿ ಸೊಪ್ಪು ಕಡಿಯುತ್ತಿದ್ದಾಗ ಆಯ ತಪ್ಪಿ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಮತ್ತೆ ಎಂದೂ ಮೇಲೇಳಲಾಗದೆ ಹಾಸಿಗೆ ಹಿಡಿದು ಮಲಗಿರುವ ಅವರ ಬದುಕಿನ ಕರಾಳ ನೆನಪಿಗೆ ಇದೀಗ 20 ವರ್ಷ.
ಕೂಲಿ ಕೆಲಸ ಮಾಡಿ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದ ರಮೇಶ್ ಗೌಡ ಯಾನೆ ರಾಮಣ್ಣ ಗೌಡ ಅವರಿಗೆ 1999 ಮೇ. ತಿಂಗಳಲ್ಲಿ ನಡೆದ ಈ ದುರ್ಘಟನೆ ಬಳಿಕ ಮಂಗಳೂರಿನ ಕೆ.ಎಂ.ಸಿ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೀಡಿದರೂ ಮತ್ತೆ ಜೋಡಣೆಯಾಗಲೂ ಸಾಧ್ಯವೇ ಇಲ್ಲದ ರೀತಿಯಲ್ಲಿ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಇದೀಗ ಸೊಂಟದ ಕೆಳಗೆ ಸ್ಪರ್ಷ ಜ್ಞಾನವೇ ಇಲ್ಲದೆ ಅಂಗಾತ ಮಲಗಿ ಸಹಾಯಕ್ಕಾಗಿ ಸಮಾಜದ ಮುಂದೆ ಅಂಗಲಾಚುವಂತಾಗಿದೆ.
ಈ ಘಟನೆ ನಡೆದ 6 ವರ್ಷದ ಅಂತರದಲ್ಲಿ ತಾಯಿ ರುಕ್ಮಿಣಿ ಲಿವರ್ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ದುಡಿಯಲು ಶಕ್ತಿ ಇಲ್ಲದ ತಂದೆ ಅಣ್ಣು ಗೌಡ, ಎಲ್ಲವನ್ನೂ ನಿರ್ವಹಿಸುತ್ತಿರುವ ಸಹೋದರ ಏಕನಾಥ ಯಾನೆ ವಿಜಯ ಗೌಡ ಮತ್ತು ಅವರ ಪತ್ನಿ ಪುಷ್ಪಾ ಅವರು, ಅವಿವಾಹಿತರಾಗಿರುವ ರಮೇಶ್ ಗೌಡ ಅವರ ಎಲ್ಲಾ ಆರೈಕೆಯನ್ನು ಈಗ ನಡೆಸುತ್ತಿದ್ದಾರೆ.
ವಾಟರ್‌ಬೆಡ್ ಮೇಲೆ ಮಲಗಿ, ಮನೆಯೊಳಗೆ ವೀಲ್ ಚೇರ್‌ನಲ್ಲೇ ಅತ್ತಿಂದಿತ್ತ ಸುತ್ತಾಡುತ್ತಿರುವ ರಮೇಶ್ ಗೌಡರು ಇದುವರೆಗೆ ಹೇಗೋ ಕಷ್ಟದಿಂದ ದಿನದೂಡುತ್ತಿದ್ದರು. ಆದರೆ 43 ತುಂಬಿದ ಅವರಿಗೆ ಇದೀಗ ದುರಾದೃಷ್ಟವಶಾತ್ ಬಿ.ಪಿ, ಶುಗರ್ ಕಾಯಿಲೆ ಸೇರಿಕೊಂಡಿದೆ. ತಿಂದ ಆಹಾರ ಚೆನ್ನಾಗಿ ಕರಗದೆ ಸಮಸ್ಯೆಗೆ ಸಿಲುಕಿದ್ದಾರೆ. ಮೂರ್‍ನಾಲ್ಕು ದಿನಗಳಿಗೊಮ್ಮೆ ಮಲವಸರ್ಜನೆ ಆಗುವ ಅವರಿಗೆ ಮೂತ್ರ ಹೋಗುವ ವಿಚಾರವೇ ಗೊತ್ತಾಗುತ್ತಿಲ್ಲ. ನಿರಂತರ ಹರಿದು ಹೋಗುತ್ತಿದ್ದ ಮೂತ್ರಕ್ಕೆ ಪೈಪ್ ಹಾಕಿದ್ದುದು ಎಲರ್ಜಿಗೊಳಗಾದಾದ ಅದನ್ನು ಬೇರ್ಪಡಿಸಲಾಗಿದೆ.
ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ವಾಹನ ಬಾಡಿಗೆ ನೀಡಿ ಅಷ್ಟು ದೂರ ಹೋಗಲಾಗುತ್ತಿಲ್ಲ. ಅದಕ್ಕಾಗಿ ಅಲ್ಲಿಂದ ಇಂಜೆಕ್ಸನ್ ತರಿಸಿ ಸ್ಥಳೀಯ ವೈದ್ಯರ ಬಳಿಯೇ ಚಿಕಿತ್ಸೆ ಮುಂದುವರಿಸಿದ್ದಾರೆ.
ವಿಕಲಾಂಗರ ಮಾಶಾಸನ 1400 ರೂ. ಮಾತ್ರ ಅವರಿಗೆ ಬರುತ್ತಿದ್ದು ಇವರ ಮಾಸಿಕ ಚಿಕಿತ್ಸೆಗೇ 3-4 ಸಾವಿರ ರೂ.ಗಳ ವರೆಗೆ ಖರ್ಚಾಗುತ್ತಿದೆ. ಸೇವಾ ಭಾರತಿ ಕನ್ಯಾಡಿ ಇವರ ಮೂಲಕ ವೀಲ್‌ಚೇರ್ ಸೌಲಭ್ಯ ದೊರೆತಿದೆ. ಅವರೇ ನಡೆಸುವ ಬೆನ್ನುಹುರಿ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ಇವರು ನೋಂದಾವಣೆ ಮಾಡಿಸಿಕೊಂಡಿದ್ದರೂ ಇಲ್ಲಿ ಮೂರು ತಿಂಗಳ ಚಿಕಿತ್ಸೆಗೆ ಬೇಕಾದ ಹೆಚ್ಚಿನ ಮೊತ್ತ ಪಾವತಿಸಲು ಇವರು ಅಶಕ್ತರಾಗಿದ್ದಾರೆ. ಅಲ್ಲದೆ ಇವರಿಗೆ ಜೊತೆಗಾರರಾಗಿ ಯಾರಾದರೊಬ್ಬರು ಒಟ್ಟಿಗೆ ಇರಬೇಕಾಗಿದ್ದು ಮನೆಯಲ್ಲಿ ಯಾರೂ ಇಲ್ಲದ್ದರಿಂದ ಅದು ಕನಸಿನ ಮಾತಾಗಿ ಅಲ್ಲಿಗೆ ಹೋಗುವ ಯೋಜನೆಯನ್ನೇ ಇದೀಗ ರಮೇಶ್ ಗೌಡ ಕೈ ಬಿಟ್ಟಿದ್ದಾರೆ. 2 ದಶಕದಿಂದ ಹಾಸಿಗೆ ಹಿಡಿದು ಮಲಗಿರುವ ರಮೇಶ್ ಗೌಡರು ಇದೀಗ ದಿನದಿಂದ ದಿನಕ್ಕೆ ಬದುಕಿನ ಭರವಸೆ ಕಳೆದುಕೊಳ್ಳಲಾರಂಭಿಸಿದ್ದಾರೆ.ಇಂತಹಾ ಸ್ಥಿತಿಯಲ್ಲಿರುವ ಅವರು ಇದೀಗ ಸುದ್ದಿ ಪತ್ರಿಕೆ ಮೂಲಕ ದಾನಿಗಳು ನೆರವು ಕೋರಿದ್ದಾರೆ.

ದಾನಿಗಳು, ಅಥವಾ ಸಂಘ ಸಂಸ್ಥೆಗಳ ಇವರ ನೋವಿಗೆ ಸ್ಪಂದಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.
ಸಹಾಯ ಮಾಡಲು ಬಯಸುವವರು:
ಖಾತೆ ಸಂಖ್ಯೆ 3782500100155701, IFSC ಕೋಡ್ KARB000378, (ಖಾತೆಯಲ್ಲಿರುವ ಅವರ ಹೆಸರು: ರಾಮಣ್ಣ ಗೌಡ:)(ಕರ್ನಾಟಕ ಬ್ಯಾಂಕ್ ಕಾಯರ್ತಡ್ಕ ಶಾಖೆ ಇಲ್ಲಿಗೆ ಸಂದಾಯ ಮಾಡಬಹುದು). ಯಾರಾದರೂ ಅವರನ್ನು ಖುದ್ದು ಭೇಟಿ ಮಾಡಲು ಬಯಸುವುದಾದರೆ ಅವರ ಸಂಪರ್ಕಕ್ಕ ಸಂಖ್ಯೆ: 9008232906. ಇದಕ್ಕೆ ಕರೆಮಾಡಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.