HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಸತ್ಯನಾರಾಯಣ ಭಟ್ ರಿಗೆ ಪಿ.ಎಚ್.ಡಿ.

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರೋನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಸತ್ಯನಾರಾಯಣ ಭಟ್ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಬೆಳಗಾವಿ ಪಿ.ಎಚ್.ಡಿ ಪದವಿ ನೀಡಿದೆ.
ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಡಾ. ರಾಜ್‌ಕಿರಣ್ ಬಲ್ಲಾಳ್ ಅವರ ಮಾರ್ಗದರ್ಶನದಲ್ಲಿ “ಇನ್‌ವೆಸ್ಟಿಗೇಶನ್ ಆನ್ ಎಂ.ಪಿ.ಪಿ.ಟಿ ಫಾರ್ ಗ್ರಿಡ್ ಕನೆಕ್ಟೆಡ್ ಸೋಲಾರ್ ಪಿ.ವಿ ಸಿಸ್ಟಮ್ ಅಂಡರ್ ಪಾರ್‌ಶಲ್ ಶೇಡಿಂಗ್ ಕಂಡೀಶನ್” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದರು.
ಮೂಲತಃ ಕಾಸರಗೋಡಿನ ನೀರ್‌ಚಾಲ್‌ನವರಾಗಿದ್ದು ಪ್ರಸ್ತುತ ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಭಟ್ ಮತ್ತು ಸರಸ್ವತಿ ಎಸ್. ಭಟ್ ದಂಪತಿ ಪುತ್ರರಾಗಿರುವ ಸತ್ಯನಾರಾಯಣ ಭಟ್ ಅವರು ಪ್ರಾಥಮಿಕ ಶಿಕ್ಷಣವನ್ನು ಕಾಸರಗೋಡಿನಲ್ಲೇ ಪೂರೈಸಿ ಪಾಲಿಟೆಕ್ನಿಕ್ ಅನ್ನು ಜಯಚಾಮರಾಜೇಂದ್ರ ಡಿಪ್ಲೋಮಾ ಕಾಲೇಜಿನಲ್ಲಿ ಪಡೆದಿದ್ದಾರೆ. ಇಂಜಿನಿಯರಿಂಗ್ ಶಿಕ್ಷಣವನ್ನು ದಯಾಸಾಗರ ತಾಂತ್ರಿತ ಮಹಾವಿದ್ಯಾಲಯದಲ್ಲಿ ಪೆಡದು ಎಂ.ಟೆಕ್ ಅನ್ನು ನಿಟ್ಟೆ ಸಂಸ್ಥೆಯಿಂದ ಪಡೆದಿದ್ದಾರೆ. ಇದೀಗ ಕಳೆದ 12 ವರ್ಷಗಳಿಂದ ಅವರು ಉಜಿರೆ ಎಸ್‌ಡಿಎಂ ಐ.ಟಿ ಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಕೈಗೊಳ್ಳುತ್ತಿದ್ದಾರೆ. ಅವರ ಧರ್ಮಪತ್ನಿ ಶೈಲೇಶ್ವರಿ ಅವರೂ ಇದೇ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.
ಸತ್ಯನಾರಾಯಣ ಭಟ್ ಅವರು ಅಧ್ಯಾಪನದ ಜೊತೆಗೆ ನವೀಕರಿಸಬಹುದಾದ ಇಂಧನ ಮೂಲಗಗಳ ಬಗ್ಗೆ ಹಾಗೂ ಕೃಷಿ ಯಲ್ಲಿ ಹೊಸತನ ಆವಿಶ್ಕಾರಗಳ ಬಗ್ಗೆ ವಿಶೇಷ ಆಸಕ್ತಿ  ಹೊಂದಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.