HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎಸ್. ಜಯರಾಮಶೆಟ್ಟಿ ಯವರ ವೈವಾಹಿಕ ಜೀವನದ “ಸುವರ್ಣ ಸಂಭ್ರಮಾಚರಣೆ”

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಹಾಗೂ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸ್ಥಾಪಕ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಇವರ “75ನೇ ಸಂವತ್ಸರ” ಹಾಗೂ ವೈವಾಹಿಕ ಜೀವನದ 50ನೇ ವರ್ಷದ “ಸುವರ್ಣ ಸಂಭ್ರಮಾಚರಣೆ” ಕಾರ್ಯಕ್ರಮವು ಜು.7 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಜರುಗಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ, ಮಾಜಿ ಸಚಿವ ಬಿ.ರಮಾನಾಥ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶಶಿ ಕೆಟರರ್ಸ್ ಪ್ರೈವೇಟ್ ಲಿಮಿಟೆಡ್ ಮಾಲಕ ಶಶಿಧರ ಶೆಟ್ಟಿ ಬರೋಡಾ ಇವರುಗಳು ಎಸ್.ಜಯರಾಮ ಶೆಟ್ಟಿ ಮತ್ತು ಕಸ್ತೂರಿ ಜೆ ಶೆಟ್ಟಿ ದಂಪತಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕು ಬಂಟರ ಸಂಘದ ನಿರ್ದೇಶಕರುಗಳು, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು, ಜಾಗತಿಕ ಬಂಟರ ಸಂಘದ ವತಿಯಿಂದ ಹಾಗೂ ಗುರುವಾಯನಕೆರೆ ನವಶಕ್ತಿ ಕುಟುಂಬದ ವತಿಯಿಂದ ಜಯರಾಮ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ತಾಲೂಕಿನ ಬಂಟರ ಸಂಘದ ಅಧ್ಯಕ್ಷರುಗಳು, ಎಸ್ ಜಯರಾಮ ಶೆಟ್ಟಿಯವರ ಮಕ್ಕಳು, ಬಂಧುವರ್ಗದವರು ಉಪಸ್ಥಿತರಿದ್ದು, ಬಂದಂತಹ ಅತಿಥಿ ಗಣ್ಯರನ್ನು, ಸ್ವಾಗತಿಸಿ ಸತ್ಕರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.