ಉಜಿರೆಯಲ್ಲಿ ‘ಸೃಷ್ಠಿ’ ಮಹಿಳಾ ವಸ್ತ್ರಗಳ ಮಳಿಗೆ ಶುಭಾರಂಭ

ಉಜಿರೆ: ಇಲ್ಲಿನ ಬೆಳಾಲು ಕ್ರಾಸ್ ಬಳಿಯ ಸಾಯಿರಾಮ್ ಸೆಂಟ್ರಲ್ ವಾಣಿಜ್ಯ ಮಳಿಗೆಯ ನೆಲ ಅಂತಸ್ತಿನಲ್ಲಿ ಮಹಿಳಾ ವಸ್ತ್ರಗಳ ವಿಶೇಷ ಮಳಿಗೆ ‘ಸೃಷ್ಠಿ ಇಂದು (ಜು.4) ಶುಭಾರಂಭಗೊಂಡಿತು. ಸಂಸ್ಥೆಯ ಮಾಲಕಿ ಶ್ರೀಮತಿ ಶಶಿ ಆರ್ ರೈ ದೀಪ ಪ್ರಜ್ವಲಿಸಿ ನೂತನ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ್ ಎಲೆಕ್ಟ್ರಾನಿಕ್ಸ್‌ನ ಮಾಲಕ ಪುಷ್ಪರಾಜ ಶೆಟ್ಟಿ, ಮತ್ತು ಸುಮನ ಪಿ ಶೆಟ್ಟಿ ದಂಪತಿ, ನಿವೃತ್ತ ಬ್ಯಾಂಕ್ ಅಧಿಕಾರಿ ರಘುರಾಮ ಶೆಟ್ಟಿ ಮತ್ತು ಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ ದಂಪತಿ, ಶ್ರೀಮತಿ ಇಂದಿರಾ ಆರ್ ಶೆಟ್ಟಿ, ವೆಂಕಟ್ರಮಣ ಶೆಟ್ಟಿ, ಗಣೇಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು. ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕಿ ಹಾಗೂ ಬಂಧುವರ್ಗದವರು ಸ್ವಾಗತಿಸಿ ಸತ್ಕರಿಸಿದರು.

ಸೃಷಿ ವಸ್ತ್ರ ಮಳಿಗೆಯಲ್ಲಿ ವಿಶೇಷವಾಗಿ ಮಹಿಳಾ ವಸ್ತ್ರಗಳ ಸಂಗ್ರಹ-ಪ್ರದರ್ಶನ- ಮಾರಾಟ, ಮಹಿಳಾ ಸೇಲ್ಸ್‌ಮೆನ್‌ಗಳಿಂದ ನಗುಮೊಗದ ಸೇವೆ, ಮಹಿಳಾ ಬ್ರ್ಯಾಂಡೆಡ್ ಒಳಉಡುಪುಗಳು ಹಾಗೂ ಇತರ ಒಳವಸ್ತ್ರಗಳ ಮಾರಾಟ, ಮಹಿಳೆಯರಿಗಾಗಿ ಮಹಿಳೆಯರೇ ಶಾಪಿಂಗ್ ನಡೆಸಬಹುದಾದ ಪ್ರತ್ಯೇಕ ಮಹಿಳಾ ವಸ್ತ್ರಗಳ ಮಳಿಗೆ ಇದಾಗಿದೆ ಎಂದು ಮಾಲಕಿ ಶಶಿ ರಾಮಕೃಷ್ಣ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.