HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗೋವಿಂದೂರು: ನಿವೃತ್ತ ಮುಖ್ಯ ಶಿಕ್ಷಕಿ ಸುಮಿತ್ರಾ ಎಮ್.ವೈಯವರಿಗೆ ಬೀಳ್ಕೊಡುಗೆ

ಕಳಿಯ : ಇಲ್ಲಿನ ಗೋವಿಂದೂರು ಸ. ಉ. ಹಿ. ಪಾ. ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಎಮ್. ವೈ. ರವರಿಗೆ ಜು.3 ರಂದು ಬೀಳ್ಕೊಡುಗೆ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಳಿಯ ಪಂ. ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ. ಪಂ. ಸದಸ್ಯೆ ಮಮತ .ಎಮ್ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಸುಮಿತ್ರಾ ಮತ್ತು ಪತಿ ರಾಮನಾಥ ಭಂಡಾರಿ ದಂಪತಿಗಳಿಗೆ ಶಾಲು ಹೊದಿಸಿ ಫಲ-ಪುಷ್ಪ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ತಾ. ಪಂ. ಸದಸ್ಯ ಪ್ರವೀಣ್ ಗೌಡ ಮಾತನಾಡಿ ಸಮಾಜದಲ್ಲಿ ಗುರುಗಳಿಗೆ ಅಪಾರವಾದ ಗೌರವವಿದೆ. ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ, ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಸೃಷ್ಟಿ ಮಾಡುವ ಮೂಲಕ ಸುಮಾರು 34 ವರ್ಷಗಳ ಕಾಲ ಶಿಕ್ಷಣ ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ ಹಾಗೂ ಗೋವಿಂದೂರು ಶಾಲೆಯಲ್ಲಿ ಸುಮಾರು 8 ವರ್ಷಗಳ ಸೇವೆ ಸಲ್ಲಿಸಿ ಇಲ್ಲಿ ನಿವೃತ್ತರಾಗಿರುವುದು ಈ ಶಾಲೆಯ ಮಕ್ಕಳ, ನಿವೃತ್ತರ ಭಾಗ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಜಗನ್ನಾಥ ಪೂಜಾರಿ, ಕಳಿಯ ಪಂ. ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಳಿಯ ಪಂ. ಉಪಾಧ್ಯಕ್ಷೆ ಅಸ್ಮಾ, ಸದಸ್ಯರಾದ ತುಕಾರಾಮ ಪೂಜಾರಿ, ಸುಧಾಕರ ಮಜಲು, ವಿಜಯ ಹೆಚ್, ಪ್ರಸಾದ್, ಗೀತಾ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಭವ್ಯಾ, ಎಸ್.ಡಿ ಎಮ್.ಸಿ ಉಪಾಧ್ಯಕ್ಷ ಅಜೀಜ್ ಗೋವಿಂದೂರು, ಲತೀಫ್ ಪರಿಮ, ಎಸ್.ಡಿ.ಎಮ್.ಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಪುಷ್ಪಾ, ನಾಳ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಧ. ಗ್ರಾ. ಯೋಜನೆಯ ನ್ಯಾಯತರ್ಪು ಸೇವಾ ಪ್ರತಿನಿಧಿ ವಿನೋದ,    ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಹ ಶಿಕ್ಷಕಿ ರೇಷ್ಮಾ ಎಮ್ ಜೆ. ಸನ್ಮಾನಿತರನ್ನು ಪರಿಚಯಿಸಿದರು. ಸಹ ಶಿಕ್ಷಕಿ ಶ್ವೇತಾ ಕುಮಾರಿ ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕಿ ಸುಗುಣ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.