HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪುಂಜಾಲಕಟ್ಟೆ ಕೆ.ಪಿ.ಎಸ್‌ನಲ್ಲಿ ವನಮಹೋತ್ಸವ

ಪುಂಜಾಲಕಟ್ಟೆ; ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಜು.2 ರಂದು ಜರುಗಿತು.
ಮಡಂತ್ಯಾರು ಗಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ ಕೆ. ಕುಕ್ಕಳ ರವರು ಸಸಿ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರವು ನಮಗೆ ಪರಿಶುದ್ಧವಾದ ಗಾಳಿ, ಬೆಳಕು, ನೆರಳು, ನೀರು ಎಲ್ಲವನ್ನೂ ನೀಡುತ್ತದೆ. ಇಂತಹ ಪರಿಸರಕ್ಕೆ ನಾವೇನಾದರೂ ಕೊಡುಗೆಯನ್ನು ನೀಡಬೇಕು. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಬಹು ಉಪಯುಕ್ತ ಸಸಿಗಳನ್ನು ನೆಟ್ಟು ಪೋಷಿಸಬೇಕೆಂದು ಕರೆಯಿತ್ತರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ದಯನಂದ.ಬಿ.ಕೆ. ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸತ್ಯಕಿರಣ್ ಸ್ವಾಗತಿಸಿ, ಶಿಕ್ಷಕಿ ಶಾಂತರವರು ವಂದಿಸಿ, ಎನ್.ಸಿ.ಸಿ. ಅಧಿಕಾರಿ ನಿರಂಜನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.