ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ 29 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಕಲಾಂಗರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವರೇ ಬೆಳ್ತಂಗಡಿ ತಾಲೂಕಿನ ಬಾಕಿ ಉಳಿದಿರುವ 29 ಪಂಚಾಯತ್‌ಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಹ ವಿಕಲಾಂಗ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಡಿಂಜೆ, ಆರಂಬೋಡಿ, ಅಳದಂಗಡಿ, ಬಾರ್‍ಯ, ಬೆಳಾಲು, ಬಳಂಜ, ಚಾರ್ಮಾಡಿ, ಹೊಸಂಗಡಿ, ಇಳಂತಿಲ, ಕಡಿರುದ್ಯಾವರ, ಕಳಂಜ, ಕಳಿಯ, ಕಣಿಯೂರು, ಕಾಶಿಪಟ್ಣ, ಕೊಕ್ಕಡ, ಮಡಂತ್ಯಾರು, ಮಲವಂತಿಗೆ, ಮಿತ್ತಬಾಗಿಲು, ನಡ, ನಾವೂರು, ನಾರಾವಿ, ನೆರಿಯ, ಪಡಂಗಡಿ, ಪಟ್ರಮೆ, ಪುದುವೆಟ್ಟು, ಶಿಬಾಜೆ, ಶಿರ್ಲಾಲು, ಸುಲ್ಕೇರಿ ಮತ್ತು ತೆಕ್ಕಾರು ಗ್ರಾಮಗಳಲ್ಲಿ ಹುದ್ದೆಗಳು ಖಾಲಿಯಾಗಿದ್ದು ಅರ್ಹ ಫಲಾನುಭವಿಗಳು ಜುಲೈ 18 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿರಬೇಕು, ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು, ಜಾತಿ-ಆದಾಯ ಪ್ರಮಾಣ ಪತ್ರ, ವಿಕಲಚೇತನರ ಗುರುತಿನ ಚೀಟಿ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾ ಕಛೇರಿ(ಸಿಡಿಪಿಒ) 08256–232134, ಅಥವಾ ವಿಕಲಾಂಗರ ಸಂಯೋಜಕ ತಾ.ಪಂ ಜೋನ್ಸ್ ಬ್ಯಾಪ್ಟಿಸ್ಟ್ ಡಿಸೋಜಾ 7975199473  ಇವರನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.