HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬಂಡಿಹೊಳೆ ಅಂಚೆ ಕಛೇರಿ ಶಿಬಾಜೆಗೆ ಸ್ಥಳಾಂತರಗೊಂಡು ಶುಭಾರಂಭ

ಶಿಬಾಜೆ: ಬಂಡಿಹೊಳೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಂಚೆ ಕಛೇರಿಯು ಶಿಬಾಜೆಗೆ ಸ್ಥಳಾಂತರಗೊಂಡಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಜು.1 ರಂದು ಜರಗಿತು. ಉದ್ಘಾಟನೆಯನ್ನು ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ ನೆರವೇರಿಸಿದರು. ಶಿಬಾಜೆ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿಬಾಜೆ ಗ್ರಾ.ಪಂ ಸದಸ್ಯರಾದ ರಮೇಶ್ ಗೌಡ ಕೆ, ಕು| ಗಂಗೆ, ಪುತ್ತೂರು ಹಿರಿಯ ಅಂಚೆ ಅಧೀಕ್ಷಕ ಜಗದೀಶ ಪೈ, ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ್, ಬೆಳ್ತಂಗಡಿ ಅಂಚೆ ವಿಭಾಗದ ಮೇಲ್ವಿಚಾರಕ ಧನಂಜಯ್, ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಸಚ್ಚಿದಾನಂದ ಭಟ್, ಶಿಬಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಕೃಷ್ಣಪ್ಪ ಗೌಡ, ಶಿಬಾಜೆ ನಾಗರಿಕಾ ಹಿತರಕ್ಷಣಾ ವೇದಿಕೆ ಸಂಚಾಲಕ ಎಂ.ಜಯರಾಮ ಗೌಡ, ಶಿಬಾಜೆ ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಬಿ.ಸಂಜೀವ ಪೂಜಾರಿ, ಪರಮೇಶ್ವರ ಪೂಜಾರಿ, ಮಾಜಿ ಉಪಾಧ್ಯಕ್ಷ ಎಂ.ಪ್ರೇಮಚಂದ್ರ ರಾವ್, ಯುವ ಮುಖಂಡ ರತೀಶ ಗೌಡ ಬೇಂಗಳ, ಸೇವಾಪ್ರತಿನಿಧಿ ಯೋಗೀಶ ಗೌಡ ಬೇಂಗಳ, ಶಿಬಾಜೆ ಅಂಚೆ ಪಾಲಕ ವಿಶ್ವನಾಥ ಶೆಂಡ್ಯೆ, ಅಂಚೆಯಣ್ಣ ಉಮೇಶ್, ಊರಿನ ನಾಗರಿಕರು, ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.