ಕೊಕ್ಕಡ: ಅಕ್ರಮ ಮರ ಸಾಗಾಟ ಪತ್ತೆ: ಮರ, ಲಾರಿ ವಶ-ಓರ್ವನ ಬಂಧನ, ಇಬ್ಬರು ಪರಾರಿ

ಕೊಕ್ಕಡ: ಅಕ್ರಮ ಮರ ಸಾಗಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಮರ ಹಾಗೂ ಲಾರಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು ಇಬ್ಬರು ಪರಾರಿಯಾಗಿರುವುದಾಗಿ ವರದಿಯಾಗಿದೆ.
ಕೊಕ್ಕಡ ಗ್ರಾಮದ ಪುತ್ಯೆ ಎಂಬಲ್ಲಿಂದ ಬಿ.ಸಿ.ರೋಡ್‌ಗೆ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್‍ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳ ತಂಡ ಪುತ್ಯೆಯಲ್ಲಿ ಮರ ಹಾಗೂ ಮರ ಸಾಗಾಟಕ್ಕೆ ಬಳಸಿದ್ದ ಲಾರಿ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಲಾರಿ ಚಾಲಕ, ಮೆಲ್ಕಾರು ನಿವಾಸಿ ಅಬ್ದುಲ್ ಹಮೀದ್(45 ವ.) ಎಂಬಾತ ಸೆರೆ ಸಿಕ್ಕಿದ್ದು ಇಬ್ಬರು ಪರಾರಿಯಾಗಿರುವುದಾಗಿ ವರದಿಯಾಗಿದೆ. ವಶಪಡಿಸಿಕೊಂಡ ಮರಗಳ ಮೌಲ್ಯ 85 ಸಾವಿರ ರೂ., ಹಾಗೂ ಲಾರಿ ಮೌಲ್ಯ 4 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂಧ್ಯಾರವರ ನೇತೃತ್ವದಲ್ಲಿ ನಡೆದ ಕಾರ್‍ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಕೀರ್ತನ್ ಶೆಟ್ಟಿ, ಅಶೋಕ್, ಅರಣ್ಯ ರಕ್ಷಕ ಮಂಜುನಾಥ್ ತೆಂಬದಮಣಿ, ಭರತೇಶ್ ವಿ.ಸುವರ್ಣ, ಅರಣ್ಯ ವೀಕ್ಷಕ ದಾಮೋದರ ಪೂಜಾರಿಯವರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.