ಮರೋಡಿ: ಸ್ವಚ್ಚತಾ ಆಂದೋಲನ

 

ಮರೋಡಿ: ಸ್ಥಳೀಯ ಸಂಘಸಂಸ್ಥೆಗಳು ಸ್ವಚ್ಚತಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಯನ್ನು ಯಶಸ್ವಿಗೊಳಿಸಬಹುದು ಎಂದು ಅರುಣೋದಯ ಯುವಕ ಮಂಡಲದ ಗೌರವಾಧ್ಯಕ್ಷ ಜಯಂತ್ ಕೋಟ್ಯಾನ್ ಹೇಳಿದರು. ಅರುಣೋದಯ ಯುವಕ ಮಂಡಲ ಮರೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಮತ್ತು ಗ್ರಾಮ ಪಂಚಾಯತ್ ಮರೋಡಿ ಇವುಗಳ ಸಹಭಾಗಿತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಬಾಲಕೃಷ್ಣ ಬಂಗೇರ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಮೇಲ್ವಿಚಾರಕ ಗಿರೀಶ್ ಕುಮಾರ್, ಮಂಡಲ ಪಂಚಾಯತ್ ಮಾಜಿ ಉಪಪ್ರಧಾನರಾದ ಅಬ್ಸಾಲಿ ಬ್ಯಾರಿ, ನಾರಾವಿ ವಲಯದ ಅಧ್ಯಕ್ಷ ಯಶೋಧರ ಬಂಗೇರ, ಪಂಚಾಯತ್ ಸದಸ್ಯರಾದ ಉಮೇಶ್ ಸಾಲ್ಯಾನ್, ಪದ್ಮಶ್ರೀ ಉಪಸ್ಥಿತರಿದ್ದರು. ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿ, ಸೇವಾಪ್ರತಿನಿಧಿ ಸುಜಾತ ಇವರು ಧನ್ಯವಾದವಿತ್ತರು. ನಂತರ ನಡೆದ ಶ್ರಮದಾನದಲ್ಲಿ ಅರುಣೋದಯ ಯುವಕ ಮಂಡಲ ,ಮರೋಡಿ ಇದರ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಸ್ವಸಹಾಯ ತಂಡಗಳ ಸದಸ್ಯರುಗಳು ಮತ್ತು ಮರೋಡಿ ಗ್ರಾಮ ಪಂಚಾಯತ್ ನ ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಸುಮಾರು ೬೦ ಜನ ಶಾಂತಿ ನಗರ ಕಾಲನಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.