ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಜೇಸಿರೆಟ್ ಮತ್ತು ಲೇಡಿ ಜೇಸಿ ವಿಭಾಗದಿಂದ ಸರಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯ ಬೆಳ್ತಂಗಡಿ ಇಲ್ಲಿ ಹೆಣ್ಣು ಮಕ್ಕಳ ಮಾಸಿಕ ಸಮಸ್ಯೆ ಮತ್ತು ಆರೋಗ್ಯ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಜೆಸಿ ಆಶಾಲತ ಪಿ. ಲಾಯಿಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಘಟಕಾಧ್ಯಕ್ಷ ಪ್ರಶಾಂತ ಮತ್ತು ನಿಲಯ ಮೇಲ್ವಿಚಾರಕಿ ದೀಪಾ ಮುಖ್ಯ ಅತಿಥಿಯಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಆಸ್ಪತ್ರೆ ಬೆಳ್ತಂಗಡಿ ಇಲ್ಲಿಯ ಹಿರಿಯ ಶುಶ್ರೂಷಕಿ ಜೇಸಿ ಸುಭಾಷಿನಿ ಭಾಗವಹಿಸಿದ್ದರು. ಜೇಸಿ ರೇಖಾ ವಿನ್ಸೆಂಟ್ ವೇದಿಕೆ ಆಹ್ವಾನಿಸಿದರೆ ಜೇಸಿ ಶಾಂತಾ ಬಂಗೇರ ಆತಿಥಿಗಳನ್ನು ಪರಿಚಯಿಸಿದರು. ಕು. ಕಾವ್ಯ ಧನ್ಯವಾದವಿತ್ತರು. ಜೇಸಿ ದೀಕ್ಷಾ ಗಣೇಶ್ ಮತ್ತು ಜೇಸಿ ಗ್ರೇಸಿ ಲೊಬೊ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ನೈನ್ ಸಂಸ್ಥೆಯ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಿಸಲಾಯಿತು