ಬಳಂಜ: ವಿಷದ ಹಾವು ಕಡಿದು ಮಹಿಳೆ ಸಾವು

ಬಳಂಜ: ಇಲ್ಲಿಯ ಪರಾರಿ ಮನೆಯ ನಿವಾಸಿ ಸಂಜೀವ ಪೂಜಾರಿಯವರ ಧರ್ಮಪತ್ನಿ ವಿಮಲ(51.ವ) ರವರಿಗೆ ವಿಷದ ಹಾವು ಕಡಿದ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.2ರಂದು ನಿಧನರಾದರು.
ವಿಮಲ ರವರು ಕಳೆದ ಜೂ.28 ರಂದು ಎಂದಿನಂತೆ ತಮ್ಮ ತೋಟದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ಸಂದರ್ಬದಲ್ಲಿ ವಿಷದ ಹಾವೊಂದು ಇವರ ಬಲದ ಕಾಲಿಗೆ ಕಚ್ಚಿತ್ತು. ತಕ್ಷಣ ಇವರನ್ನು ಸ್ಥಳೀಯ ನಾಟಿ ವೈದ್ಯರಲ್ಲಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಚಿಕಿತ್ಸೆ ಪಡೆದಿದ್ದರು. ಆದರೆ ಮತ್ತೆ ರೋಗ ಉಲ್ಭಣಿಸಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಮೃತರು ಪತಿ ಸಂಜೀವ ಪೂಜಾರಿ, ಪುತ್ರರಾದ ಸಚಿನ್, ಜಗದೀಶ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.