ಪುಂಜಾಲಕಟ್ಟೆ : ಪರಿಸರ ಮಾಹಿತಿ ಹಾಗೂ ಗಿಡ ವಿತರಣೆ

Advt_NewsUnder_1
Advt_NewsUnder_1

ಪುಂಜಾಲಕಟ್ಟೆ : ಜೈ ಹನುಮಾನ್ ಭಜನಾ ಮಂಡಳಿ ಪುಂಜಾಲಕಟ್ಟೆ, ಗ್ರಾ.ಪಂ ಮಡಂತ್ಯಾರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಕ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೈ ಹನುಮಾನ್ ಭಜನಾ ಮಂಡಳಿಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ವಿತರಣೆ  ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ  ಗ್ರಾಮ ಪಂಚಾಯತ್‌ನಿಂದ ಪರಿಸರ ಸಂರಕ್ಷಣೆಯ ಕೆಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಪ್ರಗತಿಪರ ಕೃಷಿಕ ಶಿವಾಜಿ ಭಟ್‌ ನೆರವೇರಿಸಿ ಮಾತನಾಡಿ, ಇಂದಿನ ಜನಾಂಗ ಪರಿಸರ ಸಂರಕ್ಷಣೆಯ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಕಡಿಮೆ. ಪ್ರತಿಯೊಬ್ಬರು ಗಿಡಗಳ ಸಂರಕ್ಷಣೆಯ ಬಗ್ಗೆ ಜವಾಬ್ದಾರಿ ವಹಿಸಬೇಕೆಂದರು.
ಮಡಂತ್ಯಾರು ಉಪವಲಯ ಅರಣ್ಯಾಧಿಕಾರಿ ಉಲ್ಲಾಸ್‌ ಮಾತನಾಡಿ ಗಿಡಗಳನ್ನು ಅರಣ್ಯ ಇಲಾಖೆಯಿಂದ ಒದಗಿಸಲಾಗುವುದು. ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ತಿಳಿಸಿ ಪೆರಿಸರ ಸಂರಕ್ಷಣೆಯ ಬಗ್ಗೆ ಜವಾಬ್ದಾರಿಯನ್ನು ತಿಳಿಸಿದರು. ಮಡಂತ್ಯಾರು ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ ರವರು ಮಾತನಾಡಿ, ಪರಿಸರದಲ್ಲಿರುವ ಕೆಲವು ಮರಗಳ ಒಳಿತು ಕೆಡಕು ಹಾಗೂ ನೀರಿನ ಸಂರಕ್ಷಣೆ, ಮಳೆ ಕೊಯ್ಲು ಬಗ್ಗೆ ಮಾಹಿತಿ ನೀಡಿದರು.
ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯಾರವರು ಪಡೆದ ಗಿಡಗಳ ಬಗ್ಗೆ ರೈತರ ಭೂಮಿಯಲ್ಲಿ ಗಿಡಗಳ ಪಾಲನೆ ಬಗ್ಗೆ ಪರಿಶೀಸಲಾಗುವುದು ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.