ವಿದ್ಯುತ್ ಅವಘಡ: ಉಜಿರೆಯ ಯುವ ಉದ್ಯಮಿ ಸಾವು

ಉಜಿರೆ: ಇಲ್ಲಿಯ ಯುವ ಉದ್ಯಮಿಯೋರ್ವರು ತಮ್ಮ ಮನೆಯ ಕಾರು ತೊಳೆಯುವ ಸಂದರ್ಭದಲ್ಲಿ ಸ್ಪ್ರೇಗನ್‌ನಿಂದ ವಿದ್ಯುತ್ ಅವಘಡ ಸಂಭವಿಸಿ ದಾರುಣವಾಗಿ ಮೃತಪಟ್ಟ ಘಟನೆ ಜೂ.30 ರಂದು ಸಂಜೆ ನಡೆದಿದೆ.
ಉಜಿರೆಯ ಕುಂಟಿನಿ ನಿವಾಸಿ ಗೋಣಿಚೀಲ ತಯಾರಿ ವ್ಯಾಪಾರಿ ಇಬ್ರಾಹಿಂರವರ ಪುತ್ರ ಅಲ್ತಾಫ್ ವಾಫೀರ್( 28.ವ) ಘಟನೆಯಲ್ಲಿ ಮೃತಪಟ್ಟ್ಟ ದುರ್ದೈವಿ.
ಇವರು ಸಂಜೆ ವೇಳೆ ತಮ್ಮ ಮನೆಯ ಕಾರು ತೊಳೆಯುವ ಸಂದರ್ಭದಲ್ಲಿ ಸ್ಪೇಗನ್ ಬಳಸಿದ್ದು. ಪ್ಲಗ್ ತೆಗೆಯುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ಸಂಭವಿಸಿತ್ತು. ಆ ಕೂಡಲೇ ಅವರು ತಮ್ಮ ಅಣ್ಣನನ್ನು ಕೂಗಿ ಸ್ವಿಚ್ ತೆಗೆಯುವಂತೆ ಸೂಚಿಸಿದ್ದು, ನೀರಿನ ತೇವಾಂಶಕ್ಕೆ ಅವರ ಮೈಮೇಲೆ ಒಮ್ಮೆಲೇ ಹರಿದುಬಂದ ವಿದ್ಯುತ್ ಪ್ರವಾಹದಿಂದ ಗಂಭೀರ ಸ್ಥಿತಿಗೆ ತಲುಪಿದ್ದರು. ಕೂಡಲೇ ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದರು. ಆ ಬಳಿಕ ಅವರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು.
ಅಲ್ತಾಫ್ ವಾಫೀರ್‌ರವರು ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಚಾಂಪಿಯನ್ ಆಗಿದ್ದು, ಉತ್ತಮ ಕ್ರೀಡಾಪಟುವಾಗಿದ್ದರು ಹಾಗೂ ಉಜಿರೆ ಅಲ್‌ಅಮೀನ್ ಯಂಗ್‌ಮೆನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಲ್ಲಿದ್ದರು.
ಇವರಿಗೆ ಮೂರುತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದು, ತಂದೆ ಇಬ್ರಾಹಿಂ, ತಾಯಿ, ಪತ್ನಿ, ಸಹೋದರರು, ಸಹೋದರಿಯರು ಹಾಗೂ ಬಂಧುವರ್ಗದವರನನ್ನು ಅಗಲಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.