ರಕ್ತೇಶ್ವರಿ ಪದವು: ಶಾಲಾ ವಠಾರದಲ್ಲಿ ವನ ಮಹೋತ್ಸವ.ಸಸಿ ವಿತರಣೆ.

 

ರಕ್ತೇಶ್ವರಿ ಪದವು:ಇಲ್ಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಕ್ತೇಶ್ವರಿ ಪದವು ವಠಾರದಲ್ಲಿ ವನಮಹೋತ್ಸವ ಕಾರ್ಯ ಕ್ರಮ  ಜೂ.29 ರಂದು ನಡೆಯಿತು. ಶಾಲಾ ಎಸ್ ಡಿ ಎಮ್ ಸಿ.ಅಧ್ಯಕ್ಷ ವಿಜಯ ಗೌಡ ಕಲಾಯಿತೋಟ್ಟು ಗಿಡ ನೇಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಬೆಳ್ತಂಗಡಿ ಅರಣ್ಯ ಇಲಾಖೆ, ಗೇರುಕಟ್ಟೆ ಶಾಖೆ ಉಪ ವಲಯ ಅರಣ್ಯಧಿಕಾರಿ ಹರಿ ಪ್ರಸಾದ್ ಉಚಿತ ವಾಗಿ ವಿವಿಧ ಬಗ್ಗೆಯ ಸಸಿಗಳನ್ನು ವಿತರಣೆ ಮಾಡಿ ಮಾತನಾಡುತ್ತಾ ಮಕ್ಕಳು ಬಾಲ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊಂದಿಗೆ ಅರಣ್ಯ, ಪರಿಸರದ ಬಗ್ಗೆ ಹೆಚ್ಚು ಅಸಕ್ತಿ ವಹಿಸಬೇಕು ಹಾಗೂ ನೀರಿನ ಗುಣಮಟ್ಟವನ್ನು ಹೆಚ್ಚಿಸಲು ಅರಣ್ಯ ಸಂರಕ್ಷಣೆಗೆ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸುವಂತೆ  ಕರೆಯಿತ್ತರು.

ನ್ಯಾಯತರ್ಪು ಗ್ರಾಮ ಅರಣ್ಯ ಸಮಿತಿ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಕ್ತೇಶ್ವರಿ ಪದವು, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ,ಅಂಗನವಾಡಿ ಕೇಂದ್ರ, ನೇತಾಜಿ ಕ್ರೀಡಾ ಸಂಘಗಳ ಸಹಭಾಗಿತ್ವದಲ್ಲಿ ನಡೆಯಿತು. ವನ ಪಾಲಕ ಭವಾನಿ ಶಂಕರ್,ಅರಣ್ಯ ವೀಕ್ಷಕ ಗಪೂರು ಸಾಹೇಬು,ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಸಂತ ವಂಜಾರೆ, ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ಯಾದವ ಗೌಡ ಮುದ್ದಂಜ,ಮಾಜಿ ಸೈನಿಕ ದಿನೇಶ್ ಗೌಡ ಕಲಾಯಿತೋಟ್ಟು, ನೇತಾಜಿ ಕ್ರೀಡಾ  ಸಂಘ ಅಧ್ಯಕ್ಷ ಸಿದ್ದಪ್ಪಗೌಡ ಹಾಕೋಟೆ,ಶಾಲಾ ಸಹಾಯಕ ಶಿಕ್ಷಕಿ ಲಾವಣ್ಯ,ಕಂಪ್ಯೂಟರ್‌ ಶಿಕ್ಷಕಿ ವಿಧ್ಯಾ ಶ್ರೀ, ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಮಹಿಳೆಯರು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.