ಜೀವನ ರೂಪಿಸಲು ಮಾರ್ಗ ತೋರುವ ಶಿಕ್ಷಣ

Advt_NewsUnder_1
Advt_NewsUnder_1
Advt_NewsUnder_1
ಗಾಯತ್ರಿ ಗೌಡ, ಎಸ್.ಡಿ.ಎಮ್ ಕಾಲೇಜು ,ಉಜಿರೆ

ಮನುಜನ ಜೀವನ ಅನ್ನೂದು ಒಂದು ಪಯಣದ ಹಾಗೆ. ಈ ಪಯಣದಲ್ಲಿ ಕೆಲವೊಂದು ಹಂತಗಳಿವೆ ಎಳೆ ವಯಸ್ಸು, ಯೌವನ ಹಾಗೂ ಮುದಿ ವಯಸ್ಸು. ಈ ಎಲ್ಲಾ ಹಂತದಲ್ಲೂ ವಿದ್ಯಾಭ್ಯಾಸ ಅನ್ನೋದು ಮಹತ್ವವಾದಂತಹ ಪಾತ್ರವಹಿಸುತ್ತದೆ. ಏಕೆಂದರೆ ಈ ಆಧುನಿಕ ಯುಗದಲ್ಲಿ ಎಜ್ಯುಕೇಶನ್ ಇಲ್ಲದವನು ಯಾವುದಕ್ಕೂ ಯ್ಯೋಗ್ಯನಲ್ಲ ಅನ್ನೋದರ ಮಟ್ಟಿಗೆ ಈ ಸಮಾಜ ಬೆಳೆಯುತ್ತಿದೆ. ಈಗ ಯಾವುದೇ ಒಂದು ಸಣ್ಣ ಕೆಲಸ ಪಡೆಯಬೇಕಾದರು ಅಲ್ಲಿ ಮುಖ್ಯವಾಗಿ ಗಣನೆಗೆ ಬರುವುದು ವಿದ್ಯಾರ್ಹತೆ, ಅಥವಾ ಇನ್ಯಾವುದೇ ಉದ್ಯೋಗ ಸಂದರ್ಶನಕ್ಕೆ ಹೋದರು ಅಲ್ಲಿ ಕೇಳುವ ಮೊದಲ ಪ್ರಶ್ನೆ ನಿಮ್ಮ ವಿದ್ಯಾರ್ಹತೆ ಎಷ್ಟು?. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಮೋಜು ಮಸ್ತಿಗೆ ಎಷ್ಟು ಪ್ರಾಮುಖ್ಯತೆ ಕೊಡ್ತಿವೋ ಅಷ್ಟೇ ಓದಿನ ಕಡೆಗೂ ಗಮನಹರಿಸಬೇಕಾಗುತ್ತದೆ.

ಅದೊಂದು ಮಾತಿದೆ ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಈ ಮಾತು ಖಂಡಿತವಾಗಿಯೂ ನಿಜವಾದುದ್ದು. ಏಕೆಂದರೆ ಈ ಹಂತದಲ್ಲಿ ವಿದ್ಯಾರ್ಥಿಗಳು ಮೋಜು ಮಸ್ತಿ ಅನ್ನೋ ಹೆಸರಿನಲ್ಲಿ ಸಮಯ ಹಾಳು ಮಾಡುತ್ತಿರುತ್ತಾರೆ. ಮುಂದಿನ ಜೀವನದ ಬಗ್ಗೆ ಅರಿತುಕೊಳ್ಳುವ ಕಡೆಗೆ ಮುಖನೂ ಮಾಡೋದಿಲ್ಲ. ಈ ಎಲ್ಲದರ ಬಗ್ಗೆ ಅರಿವಿಗೆ ಬರೋ ವೇಳೆಯಲ್ಲಿ ವಿದ್ಯಾರ್ಥಿ ಜೀವನವೇ ಕಳೆದು ಹೋಗಿರುತ್ತದೆ.
ಈ ವಿದ್ಯಾರ್ಥಿ ಜೀವನದಲ್ಲಿ ಅದೆಷ್ಟೋ ನಮ್ಮ ಪ್ರತಿಭೆಗಳನ್ನು ಹೊರ ಪ್ರಪಂಚಕ್ಕೆ ತೆರೆದಿಡಲು ಇರುವಂತಹ ಒಂದು ಸಮಯ, ಆದರೆ ಇಲ್ಲಿ ಎಷ್ಟು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ ಅನ್ನೋದು ಮುಖ್ಯ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಷ್ಟೇ ಪ್ರಬುದ್ಧವಾಗಿ ಚಿಂತಿಸಿದರೂ  ಸಾಲೋದಿಲ್ಲ, ನಮಗಿಂತ ಒಂದು ಕೈ ಮುಂದು ಅನ್ನೋರೆ ಕಾಣಸಿಗುವುದು ಹೆಚ್ಚು . ಆದ್ದರಿಂದ ಈ ಒಂದಹಂತದಲ್ಲಿ ಸಿಗುವಂತಹ ಎಲ್ಲಾ ಅವಕಾಶಗಳನ್ನು ಅರಿತುಕೊಂಡು ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಮುಂದುವರಿದರೆ ಜೀವನ ಪರ್ಯಂತ ಸುಖಕರವಾಗಿ ಬಾಳುದರಲ್ಲಿ ಎರಡನೇ ಮಾತೇ ಬರೋದಿಲ್ಲ.
ಈ ವಿದ್ಯಾರ್ಥಿ ಜೀವನದಲ್ಲಿ ಗುರುಗಳು ಕೇವಲ ವಿದ್ಯಾಭ್ಯಾಸ ಪೂರೈಸುವುದು ಮಾತ್ರವಲ್ಲದೇ, ಜೀವನ ನಡೆಸುವ ಕುರಿತು ಹಾಗೂ ಇನ್ನೂಬ್ಬರ ಜೊತೆ ವ್ಯವಹರಿಸುವ ಬಗೆ ತಿಳಿಸಿಕೊಡುತ್ತಾರೆ. ಹೀಗೆ ಅದೆಷ್ಟೋ ವಿಷಯಗಳನ್ನು ತಿಳಿಸಿಕೊಡುವ ಮೂಲಕ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುವ ಕೆಲಸ ನಿರ್ವಹಿಸುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.