ಲಾಯಿಲ ಪ್ರಸನ್ನ ಯೋಗ ದಿನಾಚರಣೆ

ಬೆಳ್ತಂಗಡಿ : ಇಲ್ಲಿಯ ಪ್ರಸನ್ನ ಪಿ.ಯು ಕಾಲೇಜು ಮತ್ತು ಕೇಂದ್ರಿಯ ವಸತಿ ಶಾಲೆಯಲ್ಲಿ ಜೂ.21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಫ್ರೇಂಕ್ ಹಿಲೆರಿ ಡಿಸೋಜ ಯೋಗದ ಮಹತ್ವ ಮತ್ತು ಅಗತ್ಯತೆಯನ್ನು ವಿವರಿಸುತ್ತಾ ಎಲ್ಲರನ್ನು ಸ್ವಾಗತಿಸಿದರು. ಯೋಗ ಶಿಕ್ಷಕ ಸುಬ್ರಹ್ಮಣ್ಯರ ನಿರ್ದೇಶನದಲ್ಲಿ ಎರಡು ಹಂತದಲ್ಲಿ ಯೋಗಾಭ್ಯಾಸ ಮಾಡಲಾಯಿತು. ಇಂಗ್ಲೀಷ್ ಶಿಕ್ಷಕ ಜೋನ್.ವಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿ ಶೀಲಾಪ್ರಭಾ ಯೋಗಾಭ್ಯಾಸ ಮತ್ತು ಆರೋಗ್ಯ ಇದರ ಸಂಬಂಧವನ್ನು ವಿವರಿಸಿದರು. ಪ್ರಾಥಮಿಕ ಹಂತದಿಂದ ಪದವಿ ಪೂರ್ವ ವಿದ್ಯಾರ್ಥಿಗಳವರೆಗೆ ವಿವಿಧ ಹಂತಗಳಲ್ಲಿ ಯೋಗಾಭ್ಯಾಸ ಮಾಡಲಾಯಿತು. 30 ಶಿಕ್ಷಕರು ಹಾಗೂ 370 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.