ಬೆಳ್ತಂಗಡಿ : ಯೋಗ ಸಂದೇಶ ಧ್ಯಾನ ಕೆಂದ್ರ ಬೆಳ್ತಂಗಡಿ ಮತ್ತು ಭಗವಾನ್ ಸತ್ಯಸಾಯಿ ಸೇವಾಕ್ಷೇತ್ರ ಹಳೆಕೋಟೆ ಇದರ ಸಹಯೋಗದಲ್ಲಿ ವಿಶ್ವಯೋಗ ದಿನಾಚರಣೆಯು ವಿಜೃಂಭಣೆಯಿಂದ ಜರಗಿತು.ವಿಶ್ವಯೋಗ ದಿನಾಚರಣೆಯನ್ನು ಮುಂಜಾನೆ ಶಾಸಕ ಹರೀಶ್ ಪೂಂಜ ಜ್ಯೋತಿ ಪ್ರಜ್ವಲಿಸುವ ಮುಖಾಂತರ ಉದ್ಘಾಟನೆ ಮಾಡಿ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು. ಮತ್ತು ಯೋಗದ ಜೊತೆಯಲ್ಲಿ ತಾವು ಸಮಾಜಸೇವೆ ಮಾಡುವುದರ ಮುಖಾಂತರ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಶುಭ ಹಾರೈಸಿದರು. ನಂತರ ಶಾಸಕರನ್ನು ಗೌರವಿಸಲಾಯಿತು. ಯೋಗ ಗುರುಗಳಾದ ಮಹೇಶ್ ಪತ್ತಾರ್ ಅವರು ಯೋಗ ಪಟುಗಳಿಗೆ ಯೋಗದ ಪ್ರಾತ್ಯಕ್ಷಿತೆ ನೀಡಿ ಶುಭ ಹಾರೈಸಿದರು. ನಂತರ ವಿವಿಧ ಯೋಗಾಭ್ಯಾಸವನ್ನು ಮಾಡಿಸಿದರು.
ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಸತತ 8ನೇ ಬಾರಿಗೆ 100% ಫಲಿತಾಂಶ ಹಾಗೂ 169 ಸರಕಾರಿ ಪ್ರೌಢಶಾಲೆಯ ಪೈಕಿ, ಗುರುವಾಯನಕೆರೆ ಪ್ರೌಢಶಾಲೆ ಗುಣಮಟ್ಟದಲ್ಲಿ 4ನೇ ಬಾರಿಗೆ ಪ್ರಥಮ ರ್ಯಾಂಕ್ ಪಡೆದ ಪ್ರಯುಕ್ತ ಈ ಶಾಲೆಯ ಜಗನಾಥ್ ಉಪಧ್ಯಾಯ ಹಾಗೂ ಯೋಗ ಕೇಂದ್ರದ ಯೋಗಬಂಧು ಅವರನ್ನು ಸನ್ಮಾನಿಸಿ ಗೌರವಧನ ನೀಡಲಾಯಿತು.ಯೋಗ ಗುರು ಧರ್ಮಸ್ಥಳ ಸಂಸ್ಥೆಯ ಕುಮಾರಿ ರಶ್ಮಿ ಎ.ಆರ್ ಜೈನ್ರವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಪಡೆದ ಕುಮಾರಿ ಶ್ರದ್ಧಾ ಎನ್ ಅವರಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು.ಹಲವಾರು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಉಚಿತ ಯೋಗ ತರಬೇತಿ ನೀಡಿದ ಯೋಗ ಗುರು ಮಹೇಶ್ ಪತ್ತಾರ್ ಮತ್ತು ಶಾರದಾಂಬ ಯೋಗ ಧ್ಯಾನ ಕೇಂದ್ರ ಗುರುವಾಯನಕೆರೆ ಇಲ್ಲಿನ ಅಧ್ಯಕ್ಷ ಸಿ.ಎಚ್.ಪ್ರಭಾಕರ ಇವರನ್ನು ಶಾಸಕರು ಸನ್ಮಾನಿಸಿದರು.ಮಂಗಳಾ ರತ್ನಾಕರ ಯೋಗದ ಮಹತ್ವ ತಿಳಿಸಿ ಸ್ವಾಗತಿಸಿದರು.ರಾಜ್ಗೋಪಾಲ್ ಭಟ್ ಧನ್ಯವಾದವಿತ್ತರು.
ತಿಲಕ್,ಸುಖೇಶ್ ಜೈನ್, ಚಂದ್ರಶೇಖರ್ ಭಟ್, ಸುಮಿತಾ ವಿ. ಫರ್ನಾಂಡಿಸ್, ರತ್ನಾಕರ್ ರಾವ್, ರಾಗಿಣಿ, ಸತೀಶ್ ನಾಯಕ್ ಮತ್ತು ಎಲ್ಲಾ ಯೋಗ ಬಂಧುಗಳು ಬಹಳ ಉತ್ತಮ ರೀತಿಯಲ್ಲಿ ಸಹಕರಿಸಿದರು.