ವಾಣಿ ಪದವಿಪೂರ್ವ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿಯ ಹಳೆಕೋಟೆ ವಾಣಿ ಪದವಿಪೂರ್ವ ಕಾಲೇಜಿನ 2019-20 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಸಂಘದ ಉದ್ಘಾಟನಾ ಕಾರ್ಯಕ್ರಮವು ಸಂತೆಕಟ್ಟೆ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಜೂ .29ರಂದು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ಪ್ರದೀಪ್ ನಾವೂರು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೋಮೇ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ನಿಕಟಪೂರ್ವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಸಂಸ್ಥೆಯ ಉಪಾಧ್ಯಕ್ಷರಾದ  ನ್ಯಾಯವಾದಿ ರಾಮಚಂದ್ರ ಗೌಡ, ನಾರಾಯಣ ಗೌಡ, ಸಂಸ್ಥೆಯ ಕೋಶಾಧಿಕಾರಿ ರಾಜೀವ ಗೌಡ, ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ, ಉಪಪ್ರಾಂಶುಪಾಲ ವಿಷ್ಣುಪ್ರಕಾಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ, ವಾಣಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಧಿಕಾರಿಗಳಾದ ಮಹಾಬಲ ಗೌಡ, ಶಾಲಿಕಾ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನುದೀಪ್, ಉಪಾಧ್ಯಕ್ಷೆ ಕು| ಹರಿಪ್ರಿಯಾ, ಕಾರ್ಯದರ್ಶಿ ಸುಜನ್, ಜತೆ ಕಾರ್ಯದರ್ಶಿ ಕು| ಸೋನಾಕ್ಷಿ, ಸಾಂಸ್ಕೃತಿಕ ಕಾರ್ಯದರ್ಶಿ ಕು| ಶ್ರಾವ್ಯ, ಕ್ರೀಡಾ ಕಾರ್ಯದರ್ಶಿ – ಪ್ರವರ್ಧನ್, ಮಹಿಳಾ ಕ್ಷೇಮಾಪಾಲನಾ ಕಾರ್ಯದರ್ಶಿ ಕು| ಗೌತಮಿ, ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.