ಪುಂಜಾಲಕಟ್ಟೆ: ಇಲ್ಲಿಯ ಪಿಲಾತಬೆಟ್ಟು ಗ್ರಾಮದ ನಯನಾಡಿನ ಮಿತ್ತಬೆಟ್ಟು ಮನೆಯ ವಸಂತಿ ಯವರು ಮಾರಕ ಖಾಯಿಲೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗಾಗಿ 3ಲಕ್ಕಕ್ಕೂ ಅಧಿಕ ವ್ಯವವಾಗಿದೆ. ಕಡು ಬಡತನದಲ್ಲಿರುವ ಇವರಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದು, ಪುತ್ರ ಆಟೋಚಾಲಕರಾಗಿ ದುಡಿದು ಮನೆಯ ಖರ್ಚು ಹಾಗೂ ಇತರ ಜವಾಬ್ಧಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ತನ್ನ ತಾಯಿಯ ಆರೋಗ್ಯಕ್ಕಾಗಿ ಸಾಲ ಪಡೆದು ಮೂರು ಲಕ್ಷಕ್ಕೂ ಮಿಕ್ಕಿ ಖರ್ಚು ಮಾಡಿದ್ದು, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ರೂ.10 ಲಕ್ಷ ರೂಪಾಯಿ ಅಗತ್ಯವಿದೆ.
ಬಡತನದಲ್ಲಿರುವ ಈ ಕುಟುಂಬ ತಮ್ಮ ತಾಯಿಯನ್ನು ಉಳಿಸುವ ಸಲುವಾಗಿ ದಾನಿಗಳ ಆರ್ಥಿಕ ನೆರವಿಗೆ ಮೊರೆಹೋಗಿದ್ದಾರೆ. ಆದುದರಿಂದ ಸಹೃದಯಿ ದಾನಿಗಳು ಕೈಲಾದಷ್ಟು ಸಹಾಯಧನ ನೀಡಿ ವಸಂತಿಯವರ ಕುಟುಂಬದ ಕಣ್ಣೀರು ಒರೆಸಬೇಕಾಗಿದೆ.
ಖಾತೆದಾರರ ಹೆಸರು: ವಸಂತಿ, ಸಿಂಡಿಕೇಟ್ ಬ್ಯಾಂಕ್, ಪುಂಜಾಲಕಟ್ಟೆ ಶಾಖೆ, ಖಾತೆ ಸಂಖ್ಯೆ:01562200087589 ಐಎಫ್ಎಸ್ಸಿ ಕೋಡ್: 0000156, ದೂರವಾಣಿ ಸಂಖ್ಯೆ: 94485 93847