HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತೆಯ ಹುಟ್ಟುಹಬ್ಬ ಆಚರಣೆ

ಬೆಳ್ತಂಗಡಿ: ತೀವ್ರ ಅನಾರೋಗ್ಯಕ್ಕೊಳಗಾಗಿ ಇದೀಗ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿರುವ  ಬೆಳ್ತಂಗಡಿ ನಿವಾಸಿ ಶೃತಿ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಜೂ.26 ರಂದು ರಾಜಕೇಸರಿ ತಂಡದ ಸದಸ್ಯರು ಆಸ್ಪತ್ರೆಯಲ್ಲಿ ಕೇಕ್ ಕತ್ತರಿಸಿ ಆಚರಿಸುವ ಮೂಲಕ ವಿಶೇಷ ರೀತಿಯಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ.
ಬಿಳಿ ರಕ್ತದ ಕಣಗಳ ಕೊರತೆಯಿಂದ ಬಳಲುತ್ತಾ ಮಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗದೆ, ಬೆಳ್ತಂಗಡಿ ರಾಜಕೇಸರಿ ತಂಡದ ಸಹಕಾರದೊಂದಿಗೆ ಬೆಂಗಳೂರಿನ ಸಂತ  ಜೋಸೆಫ್ ಹಾಸ್ಪಿಟಲ್‌ಗೆ ಕರೆತರಲಾಗಿದ್ದು ಈಗ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬರುತ್ತಿದೆ.
ಈ ಸಂದರ್ಭದಲ್ಲಿ ಸ್ವಾತಿ ಬೆಂಗಳೂರು, ದೀಪ ಬೆಂಗಳೂರು, ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ, ಪ್ರಮುಖರಾದ ಲೋಕೇಶ್ ಕುತ್ಲೂರು, ಪ್ರವೀಣ್ ಉಜಿರೆ, ಪ್ರವೀಣ್ ಮಡಂತ್ಯಾರು, ಸುಧೀರ್ ಭಂಡಾರಿ ಕಳಸ, ರೋಹಿತ್ ಶೆಟ್ಟಿ ಮತ್ತು ಬಳಗ ಉಪಸ್ಥಿತರಿದ್ದು, ಶೃತಿರವರು ಆದಷ್ಟು ಬೇಗ ಚೇತರಿಸಿಕೊಂಡು ತವರಿಗೆ ವಾಪಾಸ್ಸಾಗಲೆಂದು ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.