ಅಳದಂಗಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಅಳದಂಗಡಿ: ಎನ್‌ಎಸ್‌ಎಸ್ ಘಟಕ ಪದವಿ ಪೂರ್ವ ಕಾಲೇಜು ಅಳದಂಗಡಿ ಹಾಗೂ ಸತ್ಯದೇವತಾ ಸ್ಪೋರ್ಟ್ಸ್ ಕ್ಲಬ್‌ನ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಅಳದಂಗಡಿಯಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ ಅಜಿಲ ಮಾತನಾಡಿ, ಮಾನವನ ಸ್ವಾರ್ಥಪರತೆ ಪ್ರತಿ ವಿನಾಶಕ್ಕೆ ಕಾರಣವಾಗುತ್ತಿರುವ ಹಾಗೂ ಪರಿಹರಾತ್ಮಕ ಅಂಶಗಳನ್ನು ತಿಳಿಸಿದರು. ಉಪನ್ಯಾಸಕ ಸದಾನಂದ ಕುಲಾಲ್ ಹಾಗೂ ಪ್ರಸಾದ್ ಅರುವ ಮಾತನಾಡಿ, ಪ್ರಕೃತಿಯ ರಕ್ಷಣೆಗಿರುವ ವಿವಿಧ ಆಯಾಮಗಳ ಮಾಹಿತಿಯ ಜೊತೆಗೆ ತುಳುನಾಡಿನ ಧಾರ್ಮಿಕ ಆಚರಣೆ ಹಾಗೂ ಪರಿಸರ ರಕ್ಷಣೆಗಿರುವ ವೈಜ್ಞಾನಿಕ ಸಾಮ್ಯತೆಯನ್ನು ಸ್ಥೂಲವಾಗಿ ವಿವರಿಸಿದರು.
ಈಸಂದರ್ಭದಲ್ಲಿ ಅಳದಂಗಡಿ ಸುತ್ತಮುತ್ತಲ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು. ಹರೀಶ್ ಆಚಾರ್ಯ ಮಿತ್ತರೋಡಿ, ಪ್ರಸಾದ್ ಅರುವ, ಸುರೇಂದ್ರ ಜೈನ್ ಬಲ್ಯಾಯಕೋಡಿ, ಆನಂದ್ ಪೂಜಾರಿ ನೀರಲ್ಕೆ, ಚಿತ್ರೇಶ್ ನೀರಲ್ಕೆ ಹಾಗೂ ಸಹಭಾಗಿ ಸಂಸ್ಥೆಯ ಸದಸ್ಯರುಗಳು ಭಾಗಿಯಾಗಿದ್ದರು. ಯುವ ಸಂಘಟಕ ಸಂದೀಪ್ ಎಸ್ ನೀರಲ್ಕೆ ಅರ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.