HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಭ್ರಷ್ಟಾಚಾರದ ಆರೋಪ: ವೇಣೂರು ಪಂ.ಗೆ ಗ್ರಾಮಸ್ಥರಿಂದ ಮುತ್ತಿಗೆ

ನಾಮಫಲಕ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ: ತಾ.ಪಂ. ಇ.ಒ. ಭೇಟಿ

  ವೇಣೂರು: ಉದ್ಯೋಗ ಖಾತರಿ ಯೋಜನೆಯ ನಾಮಫಲಕ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮೂಡುಕೋಡಿ ಗ್ರಾಮಸ್ಥರು ವೇಣೂರು ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ವಿದ್ಯಾಮಾನ ಇಂದು (ಜೂ.27) ನಡೆದಿದೆ.

ಮನೆಗಳಿಗೆ ಉದ್ಯೋಗ ಖಾತರಿಯ ವಿವರವನ್ನು ಬರೆಯಲು ವೇಣೂರು ಗ್ರಾ.ಪಂ. ಪೈಂಟರ್ ಒಬ್ಬರನ್ನು ನೇಮಿಸಿ ಪಂ. ಸಿಬ್ಬಂದಿ ಸತ್ಯನಾರಾಯಣ ಅವರ ಮೂಲಕ ಪ್ರತೀ ಮನೆಯಿಂದ ರೂ. 1000ಕ್ಕೂ ಅಧಿಕ ಮೊತ್ತವನ್ನು ಪಡೆದಿದ್ದಾರೆಂಬುದು ಗ್ರಾಮಸ್ಥರ ಆರೋಪ. ಲಿಖಿತ ಮನವಿ ನೀಡಿದ ಗ್ರಾಮಸ್ಥರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಒ ಅವರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯರಾಮ್ ಅವರು  ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿಯ ಗಮನಕ್ಕೆ ತಂದು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೂ ಮೊದಲು ಪಂ. ಆಡಳಿತ ಮಂಡಳಿ ಫಲಾನುಭವಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಾಯಿತಾದರೂ ಫಲಪ್ರದವಾಗಲಿಲ್ಲ.
ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಬಂಗಾಡಿ ಹಾಗೂ ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.