ಬೆಳ್ತಂಗಡಿ: ಮಳೆನೀರು ಶೇಖರಣೆ ಮತ್ತು ಸಂರಕ್ಷಣೆ ಮೂಲಕ ಜಲಮರುಪೂರಣ ಅಭಿಯಾನದ ಕುರಿತು ಕ್ರಮಕೈಗೊಳ್ಳುವ ಬಗ್ಗೆ ಪೂರ್ವಭಾವಿ ಸಭೆಯು ಇಂದು(ಜೂ.27) ಬೆಳ್ತಂಗಡಿ ತಾ.ಪಂ ಸಭಾಭವನದಲ್ಲಿ ಜರುಗಿತು. ಶಾಸಕ ಹರೀಶ್ ಪೂಂಜ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಮ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.