HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಂದ್ರಾಳ ಬಸ್ ತಂಗುದಾಣ ಸ್ಥಿತಿ ಅಧೋಗತಿ

ತೋಟತ್ತಾಡಿ: ಇಲ್ಲಿಯ ಬೆಂದ್ರಾಳ ಎಂಬಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿರುವ ಬಸ್ ತಂಗುದಾಣ ಸ್ಥಿತಿ ಅದೋಗತಿಯಲ್ಲಿದೆ. ಈ ಬಸ್ ತಂಗುದಾಣದ ಬಳಿ ಸಾರ್ವಜನಿಕರು, ಶಾಲಾ ಕಾಲೇಜಿಗೆ ಹೋಗುವ ನೂರಾರು ಮಕ್ಕಳು ಬಸ್ಸಿಗಾಗಿ ಕಾಯುತ್ತಿರುತ್ತಾರೆ.

ಬಸ್ ತಂಗುದಾಣದ ಬಳಿ ಹೋಗುವಾಗ ಇದು ಬಸ್ ತಂಗುದಾಣವೋ ಅಥವಾ ಮೋರಿಯೋ ಎಂಬ ಸಂಶಯ ಬರುತ್ತದೆ.

ಮಾರ್ಗದ ಕೊಳಚೆ ನೀರು ಬಸ್ ತಂಗುದಾಣದ ಒಳಗಡೆ ಸೇರಿ ಕೆಸರು ಮಣ್ಣಿನಿಂದ ತುಂಬಿದ್ದು, ಅಲ್ಲಿ ಯಾರು? ನಿಲ್ಲಲಾಗದ ಪರಿಸ್ಥಿತಿಯನ್ನು ಉಂಟುಮಾಡಿದೆ.

ಇದನ್ನು ನೋಡುವಾಗ ಶಾಲಾ ಮಕ್ಕಳು ದಿನ ನಿತ್ಯ  ತಮ್ಮ ಆರೋಗ್ಯವನ್ನು ಪಣಕಿಟ್ಟು ಬಸ್ಸಿಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ . ಇನ್ನೂ ಒಂದಷ್ಟು ದಿನ ಕಳೆದರೆ ಅಲ್ಲಿ ನಿಂತ ಕಸ, ಕಡ್ಡಿ, ಪ್ಲಾಸ್ಟಿಕ್, ಕೊಳಚೆ ನೀರಿನಿಂದ ಯಾವುದಾದರೂ ಮಾರಕ ಖಾಯಿಲೆ ಬರುವುದರಲ್ಲಿ ಸಂಶಯವಿಲ್ಲ. ಈ ಬಸ್ ಸ್ಟ್ಯಾಂಡ್ ಬಳಿ ಬಿದ್ದಿರುವ  ತ್ಯಾಜ್ಯ ವಿಲೇಗೆ  ಸಮರ್ಪಕವಾದ ಕಸದ ತೊಟ್ಟಿಯೂ  ಇಲ್ಲ. ಆದ್ದರಿಂದ ಸಂಬಂಧ ಪಟ್ಟ  ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಬೇಕಾಗಿ ಊರಿನ ನಾಗರಿಕರು ಆಗ್ರಹಿಸಿದ್ದಾರೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.