HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸಂತೆಕಟ್ಟೆ ಬಸ್ ನಿಲ್ದಾಣದ ರಸ್ತೆಗೆ ತಾತ್ಕಾಲಿಕ ದುರಸ್ತಿ ಭಾಗ್ಯ

ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆಯ ಪಟ್ಟಣ ಪಂಚಾಯತ್ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣದ ರಸ್ತೆಯ ಡಾಂಬರು ಕಿತ್ತು ಹೋಗಿ ಕೊಚ್ಚೆಯಂತಾಗಿರುವ ಬಗ್ಗೆ ಸುದ್ದಿ ಬಿಡುಗಡೆ ಪ್ರಕಟಿಸಿದ ವರದಿಯ ಪರಿಣಾಮವಾಗಿ ತಾತ್ಕಾಲಿಕ ಕ್ರಮ ಆಗಿದೆ.

ಇಲ್ಲಿನ ಡಾಂಬರು ಕಿತ್ತು ಬಂದು ಬಸ್ ನಿಲ್ಲಿಸಲು ಸಹ ತೊಂದರೆಯಾಗುತ್ತಿತ್ತು ಎಂದು ಸುದ್ದಿ ಪತ್ರಿಕೆಯ ಜೂ.20 ಸಂಚಿಕೆಯಲ್ಲಿ ಸವಿಸ್ತಾರವಾದ ವರದಿ ಪ್ರಕಟವಾಗಿತ್ತು.

ಇದೀಗ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಂಡ ಶಾಸಕ ಹರೀಶ್ ಪೂಂಜ ಅವರು ತಕ್ಷಣ ರಸ್ತೆಯನ್ನು ದುರಸ್ತಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದು, ಅದರಂತೆ ಇದೀಗ ಪ್ರಾರಂಭಿಕ ಹಂತದಲ್ಲಿ ಗುಂಡಿಯನ್ನು ಮುಚ್ಚುವ ಕಾರ್ಯ ನಡೆಸಲಾಗಿದೆ.
ಶಾಸಕ ಹರೀಶ್ ಪೂಂಜರ ಸಲಹೆಯಂತೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಶರತ್ ಕುಮಾರ್ ಶೆಟ್ಟಿ ಮತ್ತು ಲೋಕೇಶ್ ಇವರ ಮುಂದಾಳತ್ವದಲ್ಲಿ ರಸ್ತೆಯ ದುರಸ್ತಿ ಕಾರ್ಯ ನಡೆದಿದ್ದು ಬಸ್ ಚಾಲಕರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.