HomePage_Banner_
HomePage_Banner_

94ಸಿ ಜಾಗ ಮಂಜೂರಾತಿಯಲ್ಲಿ ಭಾರಿ ಅಕ್ರಮಸಮಗ್ರ ತನಿಖೆಗೆ ದಲಿತ ಹಕ್ಕುಗಳ ಸಮಿತಿ ಆಗ್ರಹ

ಬೆಳ್ತಂಗಡಿ: 94ಸಿ ಯೋಜನೆ ಜಾಗ ಮಂಜೂರಾತಿಯಲ್ಲಿ ತಾಲೂಕಿನಲ್ಲಿ ಭಾರಿ ಅಕ್ರಮ ನಡೆದಿದ್ದು, ರಿಯಲ್ ಎಸ್ಟೇಟ್ ದಂಧೆಕೋರರು ಸರಕಾರಿ ಜಮೀನನ್ನು ಮಾರಾಟ ಮಾಡಿ 94ಸಿ ಯೋಜನೆ ಯಡಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಹಕ್ಕುಪತ್ರ ಮಾಡಿಸಿಕೊಟ್ಟು ಸರಕಾರಕ್ಕೆ ವಂಚನೆ ಮಾಡಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಶೇಖರ ಲಾಯಿಲ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪುತ್ತೂರು ಸಹಾಯಕ ಕಮೀಷನರ್‌ರಿಗೆ ಮನವಿ ಸಲ್ಲಿಸಿದ್ದಾರೆ.
ಬಳಿಕ ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೇಖರ್ ಅವರು ಅಕ್ರಮದ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಮೇಲಂತಬೆಟ್ಟು ಗ್ರಾಮದ ಸರ್ವೆ ನಂಬ್ರ 32/1ಕ್ಕೆ ತಾಗಿಕೊಂಡಿರುವ ಕುಮ್ಕಿ ಜಮೀನನ್ನು ರಿಯಲ್ ಎಸ್ಟೇಟ್‌ದಾರರು ಅಕ್ರಮವಾಗಿ ಸಮತಟ್ಟುಗೊಳಿಸಿ ಅದನ್ನು ಲೇಔಟ್ ಆಗಿ ಪರಿವರ್ತಿಸಿ, 40 ತಾತ್ಕಾಲಿಕ ಶೆಡ್ಡ್ ನಿರ್ಮಿಸಿ ಮಾರಾಟ ಮಾಡಲಾಗಿದೆ. ಇದರಲ್ಲಿ ಅಂದಿನ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ 94ಸಿ ಯೋಜನೆಯಲ್ಲಿ ಮನೆಯ ಅಡಿಯನ್ನು ಮಾತ್ರ ಪಡೆಯಲು ಅವಕಾಶವಿದೆ. ಆದರೆ ಇಲ್ಲಿ ಒಬ್ಬರಿಗೆ ಎರಡು ಸೈಟ್ ಹಾಗೂ ಪತಿ, ಪತ್ನಿಯ ಹೆಸರಲ್ಲೂ ತಲಾ 9 ಸೆಂಟ್ಸ್‌ನಂತೆ ಜಾಗ ಮಂಜೂರು ಗೊಳಿಸಲಾಗಿದೆ. ಈ ಕಡತಗಳು ಒಂದೇ ದಿನ ತಯಾರಿಸಿ, ಒಂದೇ ದಿನ ಮಂಜೂರುಗೊಂಡಿದೆ. ತಾಲೂಕಿನ ಅಸಂಖ್ಯಾತ ಅರ್ಹ ಬಡವರಿಗೆ ದೊರಕಬೇಕಾದ ಸದ್ರಿ ಯೋಜನೆಯ ಫಲವು ರಿಯಲ್ ಎಸ್ಟೇಟ್ ಉದ್ಯಮಿಗಳು ದುರುಪ ಯೋಗಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಿ ತಹಶೀಲ್ದಾರ್ ಮತ್ತು ಅದರಲ್ಲಿ ಶಾಮೀಲಾಗಿರುವ ಅವರ ಕೈಕೆಳಗಿನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದರ ಬಗ್ಗೆ ಎ.ಸಿ ಯವ ರಿಗೆ ಇಂದಿನ ಕುಂದುಕೊರತೆ ಸಭೆಯಲ್ಲಿ ದೂರು ನೀಡಿದ್ದು, ಕಂದಾಯ ಸಚಿವ ದೇಶಪಾಂಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್‌ರಿಗೆ, ಸರಕಾರದ ಕಂದಾಯ ಕಾರ್ಯದರ್ಶಿ ಗಳಿಗೆ ದೂರಿನ ಪ್ರತಿ ಕಳಿಸಲಾಗಿದೆ. ಡಿಸಿ ಅವರಿಗೂ ಪ್ರತ್ಯೇಕ ದೂರು ನೀಡಲಾಗುವುದು ಎಂದು ಶೇಖರ್ ಲಾಯಿಲ ಈ ಸಂದರ್ಭ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.