HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಾಳ: ಎನ್. ಜಯಚಂದ್ರ ಆಚಾರ್ಯರಿಗೆ ಶಿಲ್ಪಕಲಾ ಅಕಾಡೆಮಿಯಿಂದ ಗೌರವ ಪುರಸ್ಕಾರ

ಬೆಳ್ತಂಗಡಿ: ಕರ್ನಾಟಕ ಶಿಲ್ಪಕಲಾ ಅಕಾಡಮಿ ವತಿಯಿಂದ ಕೊಡಮಾಡುವ 2018 ನೇ ಸಾಲಿನ ಗೌರವ ಪ್ರಶಸ್ತಿಗೆ ಎನ್. ಜಯಚಂದ್ರ ಆಚಾರ್ಯ ನಾಳ ಇವರು ಭಾಜನರಾಗಿದ್ದಾರೆ.
ಕಾರ್ಕಳದ ಸಿ.ಇ ಕಾಮತ್ ಇನ್ಸ್‌ಟ್ಯೂಟ್ ಆಫ್ ಆರ್ಟಿಝುನ್ ಸಂಸ್ಥೆಯಲ್ಲಿ ಶಿಲ್ಪಕಲಾ ಗುರು ನಾಗೇಶ್ ಆಚಾರ್ಯ ಮತ್ತು ಗುಣಂತೇಶ್ವರ ಭಟ್ಟ ಅವರ ಜೊತೆ 2 ವರ್ಷಗಳ ಕಾಲ ಉಚಿತ ಶಿಲ್ಪಕಲಾ ವಿದ್ಯೆ ಪಡೆದುಕೊಂಡವರಾಗಿದ್ದಾರೆ. ಬಳಿಕ ಕೇಂದ್ರ ಸರಕಾರ ನಡೆಸುವ ಸಾಗರದ ಸ್ಯಾಂಡಲ್ ವುಡ್ ಕ್ರಾಫ್ಟ್ ಕಾಂಪ್ಲೆಕ್ಸ್ ಇಲ್ಲಿ ಉತ್ತರ ಭಾರತ ಮೂಲದ ಶಿಲ್ಪಕಲಾ ಗುರು ವಿಪಿನ್‌ಸಿಂಗ್ ಬದೌರಿಯಾ ಅವರಿಂದಲೂ 18 ತಿಂಗಳ ತರಬೇತಿ ಪಡೆದು ಪ್ರಸ್ತುತ ಬೆಂಗಳೂರಿನ ಬಿಡದಿಯಲ್ಲಿ ಶಿಲ್ಪಕಲಾ ವೃತ್ತಿ ಜೀವನ ನಡೆಸುತ್ತಿದ್ದಾರೆ. ಅಕಾಡಮಿ ಕೊಡುವ ಪ್ರಶಸ್ತಿಗೆ ದ.ಕ ಜಿಲ್ಲೆಯಿಂದ ಕೇವಲ ಇಬ್ಬರು ಮಾತ್ರ ಆಯ್ಕೆಯಾಗಿದ್ದು, ಈ ಪೈಕಿ ಜಯಚಂದ್ರ ಆಚಾರ್ಯ ಅವರು ಬೆಳ್ತಂಗಡಿ ತಾಲೂಕಿನವರಾಗಿದ್ದು ಹೆಮ್ಮೆ ತಂದಿದ್ದಾರೆ. ಇವರು ನಾಳ ಶ್ಯಾಮರಾಯ ಅಚಾರ್ಯ ಮತ್ತು ಲಲಿತ ದಂಪತಿ  ಪುತ್ರ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.