ಮನೆಯಡಿ ಸಕ್ರಮೀಕರಣ ಯೋಜನೆಯಡಿಯಲ್ಲಿ 50 ಸಾವಿರ ಅರ್ಜಿ ವಿಲೇ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರಾಜ್ಯದಲ್ಲೇ ಇದು ವಿಶಿಷ್ಟ ಸಾನೆ

ಬೆಳ್ತಂಗಡಿ: 94 ಸಿ ಇದು ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಸರಕಾರಿ ಭೂಮಿಯಲ್ಲಿರುವ ಮನೆಯನ್ನು ಸಕ್ರಮೀಕರಿಸುವ ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮನವಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 50 ಸಾವಿರ ಮಂದಿಯ ಮನೆಗಳನ್ನು ಸಕ್ರಮೀಕರಣಗೊಳಿಸುವ ಕೆಲಸ ಕಂದಾಯ ಇಲಾಖೆಯಿಂದ ಆಗಿದೆ. ಇದು ಕರ್ನಾಟಕ ರಾಜ್ಯದಲ್ಲೇ ಅತೀ ಹೆಚ್ಚು ಎಂಬುದು ಹೆಮ್ಮೆಯ ವಿಚಾರ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಮುಕ್ತ ಸಂವಾದಕ್ಕಾಗಿ ಜೂ. 26 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ್ದ ಅವರು ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
ಇಷ್ಟೂ ಪ್ರಮಾಣದ ಹಕ್ಕುಪತ್ರಗಳ ವಿಲೇ ಪ್ರಕ್ರಿಯೆ ನಡೆದಿರುವುದು 6 ರಿಂದ 8 ತಿಂಗಳ ವ್ಯಾಪ್ತಿಯಲ್ಲಿ. ನಮ್ಮ ಕಂದಾಯ ಇಲಾಖೆ ಬಹಳಷ್ಟು ಪ್ರಯತ್ನಪಟ್ಟು, ಸವಾಲುಗಳನ್ನೂ ಎದುರಿಸಿ ಕೆಲಸ ಮಾಡಿದ್ದಾರೆ. ಇದರಲ್ಲಿ ಎರಡು ತರದ ಲೋಪಗಳಿವೆ. ಒಂದು, ಕೆಲವು ನಮ್ಮ ಅಧಿಕಾರಿಗಳು ಜನರಿಗೆ ಪೂರಕವಾಗಿ ಕೆಲಸ ಮಾಡಿದ್ದಾರೆ. ಕೆಲವಾರು ಮಂದಿ ಅರ್ಹ ಇದ್ದರೂ ಕೂಡ ಅವರಿಗೆ ದಾಖಲೆ ಪತ್ರ ಸರಿ ಇಲ್ಲದಾಗ ಅವರಿಗೆ ಸಮಯಾವಕಾಶ ನೀಡಿ ಅದನ್ನು ಸರಿಪಡಿಸಿಕೊಂಡು ಕೆಲಸ ಮಾಡಲಾಗಿದೆ. ಎರಡನೇಯದಾಗಿ ಕೆಲವು ದಾಖಲೆಪತ್ರಗಳು ಸರಿಯಾಗಿ ಕೊಟ್ಟಿರುವುದಿಲ್ಲ, ಅಂತಹಾ ಪ್ರಕರಣಗಳಲ್ಲಿ ನಮ್ಮ ಇಲಾಖೆಯಿಂದಲೂ ಕೆಲವು ಸಮಸ್ಯೆಗಳಿದ್ದು, ಅರ್ಧದಲ್ಲಿ ಇರುವವರಿಗೂ ಅನುಕೂಲ ಮಾಡಲು ನಮ್ಮ ಕಡೆಯಿಂದ ಪ್ರಯತ್ನಗಳನ್ನು ಮಾಡಲಾಗಿದೆ.

ಈ ನಡುವೆ ಮೂರನೇ ಆರೋಪ ಇರುವುದು, ಶ್ರೀಮಂತರು ಹಾಗೂ ಸಾಕಷ್ಟು ಭೂಮಿ ಇಟ್ಟುಕೊಂಡಿರುವವರು ಈ ಯೋಜನೆಯಡಿ ಭೂಮಿ ಪಡೆದಿದ್ದಾರೆ ಎಂಬ ದೂರು. ಒಂದು ವೇಳೆ ಇದು ಆಗಿದ್ದಲ್ಲಿ ಅಕ್ಷಮ್ಯ ಅಪರಾಧವಾಗುತ್ತದೆ ಹಾಗೂ ಯೋಜನೆಯ ನಿಯಮಾವಳಿಗೆ ವಿರುದ್ಧವೂ ಆಗಿದೆ. ಒಂದು ವೇಳೆ ಅಂತಹಾ ಘಟನೆ ಆಗಿದ್ದರೆ ಅದಕ್ಕೆ ಆಗುವ ಕಾನೂನು ಕ್ರಮವನ್ನು ಅವರು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದರು. ಈಗಾಗಲೇ ತಾಲೂಕಿನ ಒಂದೆರಡು ಪ್ರಕರಣಗಳ ಬಗ್ಗೆ ನನಗೆ ದೂರು ಬಂದಿದ್ದು ಅವುಗಳನ್ನು ಪರಿಶೀಲಿಸಿ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಂಡೋ ಪಾಲನಾ ಕೇಂದ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರದ ನಿಯಮ ಪ್ರಕಾರ ಪ್ರಕ್ರಿಯೆಗಳು ನಡೆದು ವಹಿಸಿಕೊಂಡಿರುವವರಿಗೆ ಅದನ್ನು ನಡೆಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಈಗಾಗಲೇ ಪೋಷಕರು ಬೇಡಿಕೆ ಇಟ್ಟಂತೆ, ನಮ್ಮ ಮಕ್ಕಳನ್ನು ಪ್ರತೀ ವರ್ಷ ಒಬ್ಬೊಬ್ಬರ ಕೈಕೆಳಗೆ ಕೊಡುವುದಕ್ಕಿಂತ ಒಂದೇ ಟೆಂಡರ್‌ದಾರರನ್ನು ಖಾಯಂ ಗೊಳಿಸಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಆಗುವ ಬಗ್ಗೆ ನಿರ್ದೇಶನಕ್ಕೆ ಕಾಯಲಾಗುತ್ತದೆ ಎಂದರು. ಬಾಂಜಾರು ಮಲೆ ನಿವಾಸಿಗಳ ಭೂಮಿ ಸಮಸ್ಯೆ ಹಳೆಯ ಪ್ರಕರಣ. ಇದು ಸರಕಾರ ಮತ್ತು ಖಾಸಗಿದಾರರ ಮಧ್ಯೆ ನ್ಯಾಯಾಲಯ ದಲ್ಲಿರುವ ವಿಚಾರ. ಈ ಬಗ್ಗೆ ಕಳೆದ ಜಿಲ್ಲಾಧಿಕಾರಿಯಾಗಿದ್ದ ಇಬ್ರಾಹಿಂ ಅವರೂ ಸರಕಾರಕ್ಕೆ ವರದಿ ನೀಡಿದ್ದಾರೆ. ನಮ್ಮ ಕಡೆಯಿಂದಲೂ ಪೂರಕ ವರದಿ ನೀಡಲಾಗುವುದು ಎಂದರು. ಈ ಸಂದರ್ಭ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಉಪಸ್ಥಿತರಿದ್ದರು.
ಅಹವಾಲು ಸ್ವೀಕಾರ : ತಾಲೂಕು ಕಛೇರಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಮಾಹಿತಿ ಪಡೆದ ಅನೇಕ ಮಂದಿ ತಾಲೂಕು ಕಛೇರಿಗೆ ಆಗಮಿಸಿ ತಮ್ಮ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜನರ ಅಹವಾಲುಗಳನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.
ಜನ ಸೇವೆಯಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಅತ್ಯುನ್ನತ ಸಾಧನೆ ಮಾಡಿದೆ. ನಮ್ಮ ಇಲಾಖೆಯ ಕಾರ್ಯಕ್ಷಮತೆಯಲ್ಲಿ ಬಹಳ ಪ್ರಗತಿ ಆಗಿದೆ. ಅದರಲ್ಲೂ ಕೂಡ ಬೆಳ್ತಂಗಡಿ ತಾಲೂಕಿನಲ್ಲಿ ಈಗಿನ ತಹಶೀಲ್ದಾರರ ನೇತೃತ್ವದಲ್ಲಿ ಬಹಳ ಒಳ್ಳೆ ಕೆಲಸ ನಡೆಯುತ್ತಿದೆ. ಅವರು ಇಲಾಖೆಯ ಜವಾಬ್ಧಾರಿಯನ್ನು ಗಂಭೀರವಾಗಿ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿರು ಹಳೆಯ ಸಮಸ್ಯೆಗಳ ಇತ್ಯರ್ಥದ ಬಗ್ಗೆ ಕೂಡ ಏನು ಕ್ರಮ ಜರುಗಿಸಬೇಕು ಎಂದು ಈಗಾಗಲೇ ಅಧಿಕಾರಿಗಳ ಸಭೆಯಲ್ಲಿ ಸೂಕ್ತ ನಿರ್ದೇಶನ ನೀಡಿದ್ದೇನೆ. ಆ ಮೂಲಕ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.