ಧರ್ಮಸ್ಥಳ : ಇಲ್ಲಿಯ ಅಂಟೆಮಜಲು ಎಂಬಲ್ಲಿ ಸೆಕ್ಟ್ರಂ ಸ್ಟುಡಿಯೋ ಇದರ ಪ್ರಾರಂಭೋತ್ಸವವು ಇತ್ತೀಚೆಗೆ ಜರುಗಿತು.
ಸ್ಟುಡಿಯೋವನ್ನು ಕೇರಳ ಕಾಂಞಂಗಾಡ್ ಗ್ರೊಟೆಕ್ ಇನ್ಸ್ಟಿಟ್ಯೂಟ್ ಆಫ್ ಫಿಲ್ಮ್ ಮತ್ತು ಟೆಲಿವಿಷನ್ ವಿಭಾಗ ಮುಖ್ಯಸ್ಥರಾದ ಅಭಿರಾಮ್ ಸುದಿಲ್ ಉದ್ಘಾಟಿಸಿದರು.
ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲನಗೊಳಿಸಿ ಮಾತನಾಡಿ ಯುವಕರು ಪ್ರಾರಂಭಿಸಿದ ಈ ಉದ್ಯಮವು ತಾಲೂಕಿಗೆ ಮಾತ್ರವಲ್ಲ ಜಗತ್ತಿಗೆ ಶ್ರೇಷ್ಠವಾಗಿ ಬೆಳೆಯಲು ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು. ಮುಖ್ಯ ಅತಿಥಿ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ನ ಕಾರ್ಯದರ್ಶಿ ವೀರು ಶೆಟ್ಟಿ, ಧರ್ಮಸ್ಥಳ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್, ಗುರುವಾಯನಕೆರೆ ಚಿತ್ರ ಕಲಾವಿದ ಗಣೇಶ್ ಆಚಾರ್ಯ ಗುಂಪಲಾಜೆ, ಧರ್ಮಸ್ಥಳ ಗ್ರಾ. ಪಂ. ಸದಸ್ಯ ಶ್ರೀನಿವಾಸ .ಪಿ ರಾವ್, ಧರ್ಮಸ್ಥಳ ಸಿ.ಎ ಬ್ಯಾಂಕ್ ಅಧ್ಯಕ್ಷ ಹರಿದಾಸ್ ಗಾಂಭೀರ್ ಆಗಮಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಅಭಿರಾಮ್ ಸುದಿಲ್, ವಸಂತ ಆಚಾರ್ಯ ಗುಂಪಲಾಜೆ, ಧರ್ಮಸ್ಥಳ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಗಿರೀಶ್ರವರನ್ನು ಸನ್ಮಾನಿಸಲಾಯಿತು.
ವಿಕ್ರಮ್ ಗೌಡ ಹಾಗೂ ಸಂತೋಷ್ ಆಚಾರ್ಯ ಗುಂಪಲಾಜೆ ಅತಿಥಿಗಳನ್ನು ಸ್ವಾಗತಿಸಿದರು. ವಿಜೇತ್ ಕುಮಾರ್ ನೇಜಿಕಾರು ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿ, ಕೊನೆಗೆ ವಂದಿಸಿದರು.