ಉದ್ಯಮಿ ಶಶಿಧರ ಬಿ.ಶೆಟ್ಟಿ ಬರೋಡರಿಗೆ ತುಳುನಾಡ ಪೆರ್ಮೆದ ತುಳುವೆ ಪ್ರಶಸ್ತಿ

ಗುರುವಾಯನಕೆರೆ : ಕುವೆಟ್ಟು ಗ್ರಾಮದ ಗುರುವಾಯನಕೆರೆ ಶಕ್ತಿನಗರ ನವಶಕ್ತಿ ಕೃಪಾದ ನಿವಾಸಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರಿಗೆ ಅಖಿಲಭಾರತ ತುಳು ಒಕ್ಕೂಟ ಕುಡ್ಲ ವತಿಯಿಂದ ಬಂಟರ ಭವನ ಪುತ್ತೂರಿನಲ್ಲಿ ನಡೆದ ಬೊಳ್ಳಿ ಪರ್ಬ ವರ್ಷದ ಸಂಭ್ರಮದಲ್ಲಿ ತುಳುನಾಡ ಪೆರ್ಮೆದ ತುಳುವೆ ಪ್ರಶಸ್ತಿ ನೀಡಿ ಜೂ.22 ರಂದು ಗೌರವಿಸಲಾಯಿತು.
ಇವರು ಗುರುವಾಯನಕೆರೆ ನವಶಕ್ತಿ ಕೃಪಾದ ಕಾಶಿ ಶೆಟ್ಟಿ ಮತ್ತು ದಿ| ಬಾಬು ಶೆಟ್ಟಿ ದಂಪತಿಗಳ ಪುತ್ರ, ನವಶಕ್ತಿ ರಾಜೇಶ್ ಶೆಟ್ಟಿಯವರ ಸಹೋದರ ಶಶಿಧರ ಶೆಟಿಯವರು ಬರೋಡದಲ್ಲಿ ಪ್ರತಿಷ್ಠಿತ ಶಶಿ ಕ್ಯಾಟರಿಂಗ್ ಸರ್ವಿಸ್ ಪೈ.ಲಿಮಿಟೆಡ್ ಸಂಸ್ಥೆಯನ್ನು ಆರಂಭಿಸಿ ಇದನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಸಂಸ್ಥೆ ಇಂದು ಸುಮಾರು 12 ರಾಜ್ಯದಲ್ಲಿ ವಿಸ್ತರಿಸಿ8500 ಮಂದಿಗೆ ಉದ್ಯೋಗವನ್ನು ನೀಡಿದ ಹಿರಿಮೆಗೆ ಪಾತ್ರವಾಗಿದೆ.
ಸಂಸ್ಥೆಯ ಈ ಸೇವೆಯನ್ನು ಸಿಲಿಕಾನ್ ಇಂಡಿಯಾ ಗುರುತಿಸಿ ವಿಶ್ವದ 10 ಪ್ರತಿಷ್ಠಿತ ಸೇವಾ ಸಂಸ್ಥಗಳಲ್ಲಿ ಶಶಿಧರ ಶೆಟ್ಟಿಯವರ ಶಶಿ ಕ್ಯಾಟರಿಂಗ್ ಸರ್ವಿಸ್ ಸಂಸ್ಥೆ ಮೊದಲಿಗರಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಅಲ್ಲದೆ ಬೆಳ್ತಂಗಡಿ ಜೇಸಿಐ ಸಂಸ್ಥೆಯಿಂದ ಸಾಧನ ಶ್ರೀ ಪ್ರಶಸ್ತಿ, ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳದಲ್ಲಿ ಸಾಧನ ಪ್ರಸ್ತಿ ಸೇರಿದಂತೆ ಹತ್ತು-ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಸನ್ಮಾನ ನೀಡಿ ಗೌರವಿಸಿದೆ.
ಇವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗುರುತಿಕೊಂಡು, ಹಲವಾರು ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಯಶಸ್ವಿ ಉದ್ಯಮಿಯಾಗಿ ಬರೋಡ ಪ್ರತಿಷ್ಠಿತ ತುಳು ಸಂಘದ ಅಧ್ಯಕ್ಷರಾಗಿ, ಗುಜಾರತ್‌ನ ಸುತ್ತಮುತ್ತ ೫ ತುಳು ಸಂಘವನ್ನು ಹುಟ್ಟುಹಾಕಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.