ಬೆಳಾಲು: ಬೆಳಾಲು ಹಾಲು ಉತ್ಪಾದಕರ ಸಂಘದಲ್ಲಿ ನೂತನ ಸಾಂದ್ರ ಶೀಥಲೀಕರಣ ಘಟಕದ ಉದ್ಘಾಟನಾ ಸಮಾರಂಭ ಜೂ.25 ರಂದು ಜರುಗಿತು.
ದ.ಕ ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ರವಿರಾಜ ಹೆಗ್ಡೆ ಸಾಂದ್ರ ಶೀಥಲೀಕರಣ ಉದ್ಘಾಟಿಸಿ ಮಾತನಾಡುತ್ತಾ ದ.ಕ ಹಾಲು ಒಕ್ಕೂಟ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಮುಖ್ಯ ಸ್ಥಾನದಲ್ಲಿದೆ. ಜಿಲ್ಲೆ ಮತ್ತು ರಾಜ್ಯದಲ್ಲೂ ಗುಣಮಟ್ಟದಲ್ಲಿ ಹೈನುಗಾರರು ಪೂರೈಸುವ ಹಾಲನ್ನು ತಿರುಪತಿ ಲಡ್ಡು ಪ್ರಸಾದ ತಯಾರಿಗೆ ಕಳುಹಿಸಲಾಗುವುದರಿಂದ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು ಎಂದರು.
ನಾಮಫಲಕ ಉದ್ಘಾಟಿಸಿದ ದ.ಕ ಹಾಲು ಒಕ್ಕೂಟದ ನಿರ್ದೇಶಕ ಬಿ. ನಿರಂಜನ್ ಬಾವಂತಬೆಟ್ಟು ಮಾತನಾಡಿ ಹೈನುಗಾರಿಕೆ ಲಾಭದಾಯಕ ಹುದ್ದೆಯಾಗುತ್ತಿದ್ದು, ಪ್ರಾಮಾಣಿಕ ಪ್ರಯತ್ನದಿಂದ ಉತ್ತಮ ಪ್ರತಿಫಲ ಲಭಿಸುತ್ತದೆ. ತಾಲೂಕಿನಲ್ಲಿ 28 ಕೇಂದ್ರಗಳಲ್ಲಿ ಹಾಲು ಶೀಥಲೀಕರಣ ಘಟಕ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕೋಟ್ಯಾನ್ ಮಾತನಾಡುತ್ತಾ ಸಹಕಾರಿ ಸಂಘಗಳ ಮೂಲಕ ರೈತರ ಅಭಿವೃದ್ಧಿ ಸಾಧ್ಯವಾಗಿದೆ ಎಲ್ಲರೂ ಒಗ್ಗಟ್ಟಿನಿಂದ ಸಹಕಾರಿ ಕ್ಷೇತ್ರವನ್ನು ಅವಲಂಬಿಸಿಕೊಂಡು ಮುನ್ನಡೆದಾಗ ಅಭಿವೃದ್ಧಿ ಸಾಧ್ಯ ಎಂದರು.
ದ.ಕ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಡೆ, ನಾರಾಯಣ ಪ್ರಕಾಶ್, ಸವಿತಾ ಶೆಟ್ಟಿ, ದ.ಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಜಿ.ವಿ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು.
ದ.ಕ ಹಾಲು ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಡಾ| ಎಮ್. ರಾಮಕೃಷ್ಣ ಭಟ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮ, ವಿಮಲ, ಬೆಳಾಲು ಪ್ರಾ. ಕೃ. ಪ. ಸಹಕಾರಿ ಸಂಘದ ಪ್ರಭಾರ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನಾರಾಯಣ ಗೌಡ , ಬೆಳಾಲು ಶ್ರೀ. ಧ. ಮಂ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯೋಗೀಶ್ ಗೌಡ .ಎಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಎ. ರುಕ್ಮಯ್ಯ ಗೌಡ ವರದಿ ವಾಚಿಸಿದರು, ಶಾಲಿನಿ ಪ್ರಾರ್ಥಿಸಿ, ಬೆಳ್ತಂಗಡಿ ವಿಸ್ತರಣಾಧಿಕಾರಿ ಆದಿತ್ಯ ವಂದಿಸಿದರು. ಸಂಘದ ನಿರ್ದೇಶಕ ಸುಲೈಮಾನ್ ಕಾರ್ಯಕ್ರಮ ನಿರೂಪಿಸಿದರು.
ಉಪವ್ಯವಸ್ಥಾಪಕ ಉಪೇಂದ್ರ , ಶೀಥಲೀಕರಣ ಘಟಕದ ನಿರ್ವಾಹಕ ಲತೇಶ್, ಸಂಘದ ಉಪಾಧ್ಯಕ್ಷ ಪ್ರವೀಣ್ ಜೈನ್, ನಿರ್ದೇಶಕರುಗಳಾದ ದೇವಪ್ಪ ಗೌಡ .ಕೆ, ಉಮೇಶ ಗೌಡ, ಜಾರಪ್ಪ ಗೌಡ, ಯುವರಾಜ, ಡೊಂಬಯ್ಯ ಗೌಡ, ಬಿರ್ಮಣ ಪೂಜಾರಿ, ಸುಲೈಮಾನ್, ಕೃಷ್ಣಪ್ಪ ನಾಕ್, ಮಾಣಿಗ, ವಿಶಾಲಾಕ್ಷಿ. ಕೆ.ಎ, ಶೀಲಾ .ಎಸ್, ಮಾಜಿ ಅಧ್ಯಕ್ಷ ರಾಧಾಕೃಷ್ಣ ಶರ್ಮ, ಸಿಬ್ಬಂದಿಗಳಾದ ವಾಣಿ, ದಿವಾಕರ ಗೌಡ, ಪ್ರೇಮ, ಸದಸ್ಯರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಟ್ರಮೆಯಲ್ಲಿ ಜರುಗಿದ ಜಾನುವಾರು ಪ್ರದರ್ಶನದಲ್ಲಿ ಸಂಘದ ಸದಸ್ಯರು ದನ ಸಾಕಾಣೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಅಜಿತ್ಕುಮಾರ್ ಜೈನ್ ಪರಾರಿ ಮತ್ತು ಕರುಸಾಕಣೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕೃಷ್ಣರಾಜ್ ಜೈನ್ ಉಪ್ಪಡ್ನು ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.