ನಾರಾವಿ: ನಾರಾವಿಯ ಸರಕಾರಿ ಆಸ್ಪತ್ರೆ ಸಮೀಪ ಇಂದು(ಜೂ.26) ಮುಂಜಾನೆ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೈಕ್ ಸವಾರ ಸಾವ್ಯ ನಿವಾಸಿ ಕರಿಯ ಪೂಜಾರಿ ಮತ್ತು ವಿಜಯ ದಂಪತಿ ಪುತ್ರ ಪ್ರದೀಪ್ ಪೂಜಾರಿ(18.ವ) ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಪ್ರದೀಪ್ ಪೂಜಾರಿಯವರು ಬಜಗೋಳಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮುಗಿಸಿ, ರಜೆಯಲ್ಲಿದ್ದರು. ತಮ್ಮ ಅಣ್ಣನಾದ ಪ್ರಶಾಂತ್ ಪೂಜಾರಿಯವರನ್ನು ತಮ್ಮ ಬೈಕ್ನಲ್ಲಿ ನಾರಾವಿ ಪೇಟೆಗೆ ಬಿಟ್ಟು ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೃತರು ತಂದೆ ಕರಿಯ ಪೂಜಾರಿ, ತಾಯಿ ವಿಜಯ, ಸಹೋದರ ಪ್ರಶಾಂತ್, ಸಹೋದರಿ ಪ್ರಮೀಳಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.