HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಂಕಿ ಅವಘಡ ಘಟನೆ: ಸುಳ್ಯ ಬಾರ್ಬರ್ ಎಸೋಸಿಯೇಷನ್ ನಿಂದ ಆರ್ಥಿಕ ನೆರವು

ಬೆಳ್ತಂಗಡಿ: ಬೆಂಕಿ ಆಕಸ್ಮಿಕದಿಂದ ಸುಟ್ಟುಹೋಗಿ ಭಾರೀ ನಷ್ಟಕ್ಕೊಳಗಾದ ಬೆಳ್ತಂಗಡಿಯ ಸ್ಟೈಲೋ ಮೆನ್ಸ್‌ಪಾರ್ಲರ್‌ಗೆ ಜೂ.25 ರಂದು ಭೇಟಿ ನೀಡಿದ ಸುಳ್ಯ ತಾಲೂಕು ಬಾರ್ಬರ್‍ಸ್ ಅಸೋಸಿಯೇಷನ್ ಅಧ್ಯಕ್ಷ ಪದ್ಮನಾಭ ಭಂಡಾರಿ ಹಾಗೂ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ ರವರು ಸುಳ್ಯ ತಾಲೂಕು ಬಾರ್ಬರ್‍ಸ್ ಅಸೊಸಿಯೇಷನ್ ವತಿಯಿಂದ ರೂ.25 ಸಾವಿರ ಸಹಾಯಧನವನ್ನು ಸಂತ್ರಸ್ತ ಅಂಗಡಿ ಮಾಲಕ ಕೇಶವ ಭಂಡಾರಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಜಿಲ್ಲೆಯ ಕ್ಷೌರಿಕ ವೃತ್ತಿ ಬಾಂಧವರಿಗೆ ಕರೆ ನೀಡಿದ ಹರೀಶ್ ಬಂಟ್ವಾಳ್ ಭಾರಿ ನಷ್ಟಕ್ಕೊಳಗಾಗಿರುವ ಕೇಶವ ಭಂಡಾರಿಯವರ ಸಂಕಷ್ಟಕ್ಕೆ ನೆರವಾಗಲು ಜಿಲ್ಲೆಯ ಕ್ಷೌರಿಕ ಬಾಂಧವರು ಸ್ವಯಂ ಆಗಿ ಮುಂದೆ ಬರಬೇಕು. ಯಾವ ಸಂದರ್ಭದಲ್ಲಿ ಯಾರಿಗೆ ಸಂಕಷ್ಟ ಒದಗಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ದುರಂತಕ್ಕೆ ತುತ್ತಾಗಿ ಆತ್ಮ ಸ್ಥೈರ್ಯ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಸಮಾಜ ಬಾಂಧವರು ಮತ್ತು ವೃತ್ತಿ ಬಾಂಧವರು ಮುಂದೆ ಬಂದು ಕೈ ಹಿಡಿದೆತ್ತಲು ಪ್ರಯತ್ನಿಸಬೇಕು. ಕೇಶವ ಭಂಡಾರಿಯವರು ಸುಮಾರು 22 ಲಕ್ಷ.ರೂ, ನಷ್ಟಕ್ಕೆ ಒಳಗಾಗಿದ್ದಾರೆ. ಅವರು ಅಂಗಡಿಯನ್ನು ಪುನರ್‌ನಿರ್ಮಿಸಲು ಕನಿಷ್ಠ 5 ರಿಂದ 8 ಲಕ್ಷ ರೂ ಬೇಕಾಗುತ್ತದೆ. ಒಂದೊಂದು ಸೆಲೂನ್‌ರವರು ಕನಿಷ್ಟ ಒಂದು ಸಾವಿರ ರೂ ಅಥವಾ 500 ರೂ.ನಂತೆ ನೀಡಿದರೂ ಅವರಿಗೆ ಸ್ಥೈರ್ಯ ನೀಡಲು ಸಾಧ್ಯವಾಗುತ್ತದೆ ಎಂದರು.
ಅಂಗಡಿ ಮಾಲಕ ಕೇಶವ ಭಂಡಾರಿ ಮತ್ತು ಅವರ ಪುತ್ರ ವರುಣ್ ಭಂಡಾರಿಯವರು ಸದ್ರಿ ಕೊಡುಗೆ ಸ್ವೀಕರಿಸಿ ತಮ್ಮ ಕಷ್ಟಕ್ಕೆ ನೆರವಾದ ಸುಳ್ಯ ತಾಲೂಕು ಬಾರ್ಬರ್ ಎಸೋಸಿಯೇಷನ್‌ನವರ ಸೇವೆಯನ್ನು ಗೌರವಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.