ವೇಣೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸುಖೀ ಜೀವನಕ್ಕೆ ಯೋಗ ಅಗತ್ಯ: ಕರಿಂಜೆ ಶ್ರೀ

ವೇಣೂರು: ಮನುಷ್ಯನ ಒಳಗೆ ಜಾಗೃತವಾಗಿರುವ ದಿವ್ಯತ್ವವನ್ನು ಚೇತನಗೊಳಿಸಿ ಅದರ ಜತೆಗೆ ಆತ್ಮ ಸಾಕ್ಷಾತ್ಕಾರ ಗಳಿಸಿ ಸುಖೀ ಜೀವನ ಗಳಿಸಬೇಕಾದರೆ ಅದಕ್ಕಿರುವ ಮಾರ್ಗವೇ ಯೋಗ. ಯೋಗವು ದೇಹ ಮತ್ತು ಮನಸ್ಸಿಗೆ ಆರೋಗ್ಯವನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಯೋಗಕ್ಕೆ ವಿಶ್ವಮಾನ್ಯತೆ ಲಭಿಸಿದೆ. ಅನಾದಿ ಕಾಲದಿಂದ ಬಂದಿರುವ ಯೋಗ, ಪ್ರಾಣಾಯಾಮ, ಸತ್ಸಾಂಗಗಳು ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ ಎಂದು ಕರಿಂಜೆ ಓಂ ಶ್ರೀ ಶಕ್ತಿಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.
ಪತಂಜಲಿ ಯೋಗ ಪೀಠ ಹರಿದ್ವಾರ, ಪತಂಜಲಿ ಯೋಗ ಸಮಿತಿ ವೇಣೂರು ವಲಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇವರ ಸಹಭಾಗಿತ್ವದಲ್ಲಿ ಶುಕ್ರವಾರ ಇಲ್ಲಿಯ ಭರತೇಶ ಸಮುದಾಯ ಭವನದಲ್ಲಿ ಜರಗಿದ 5 ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವೇಣೂರು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಡಾ| ಶಾಂತಿಪ್ರಸಾದ್, ವೇಣೂರು ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆಯ ಸಂಚಾಲಕ ಗಿರೀಶ್ ಕೆ.ಎಚ್, ಪ್ರಾಚಾರ್ಯ ರಕ್ಷಿತ್ ಕುಲಾಲ್, ಪೊಲೀಸ್ ಸಿಬ್ಬಂದಿ ವಿಜಯ್ ಕುಮಾರ್ ರೈ, ಗಿರೀಶ್ ಕೆ.ಎಸ್., ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸತೀಶ್ ಆಚಾರ್ಯ ಮತ್ತು ಸಾತ್ವಿಕ್ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.
ಯೋಗಪಟುಗಳಾದ ಜಿನೇಂದ್ರ ಇಂದ್ರ ಮತ್ತು ಕಿಶೋರ್ ಮೂಡಬಿದಿರೆ ಅವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ಕಿಶೋರಿ ಎಸ್. ರಾವ್ ಸ್ವಾಗತಿಸಿ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಭಾರತೀಯ ಯೋಧ ರಾಮಚಂದ್ರ ನಾಯಕ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.