ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ವಾರ್ಷಿಕ ಆಚರಣೆ :ಗ್ರಾಹಕ ಸಂವಾದ

ಬೆಳ್ತಂಗಡಿ : 75 ವರ್ಷಗಳ ಸುದೀರ್ಘ ಪರಂಪರೆಯ ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿಯಲ್ಲಿ ಮೊದಲ ವರ್ಷದ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಯಿತು. ಲಕ್ಷ್ಮೀ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಆಡಳಿತ ನಿರ್ದೇಶಕ  ಕೃಷ್ಣ ನಾರಾಯಣ  ಮುಳಿಯರವರು “ಕೇವಲ ಒಂದು ವರ್ಷದ ನಮ್ಮ ಮುಳಿಯ ನಡಿಗೆಯಲ್ಲಿ ಬೆಳ್ತಂಗಡಿ ಹಾಗೂ ಆಸುಪಾಸಿನ ಜನ ನಮ್ಮನ್ನು ಮೆಚ್ಚಿ  ಆಶೀರ್ವದಿಸಿದ್ದೀರಿ, ಚಿನ್ನ ಕೊಳ್ಳುವ ಅಪೂರ್ವ ಅನುಭವ ನೀಡುವ ನಮ್ಮ ವಿಶೇಷತೆಯನ್ನ ಮೆಚ್ಚಿ ಬೆಳೆಸಿದ್ದೀರಿ, ವಂದನೆಗಳು” ಎಂದರು.

ಈ ಸಂದರ್ಭದಲ್ಲಿ ನಡೆದ ಗ್ರಾಹಕ ಹಿತೈಷಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಚೇರ್‌ಮೇನ್ ಹಾಗು ಮ್ಯಾನೆಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯರವರು ಬೆಳ್ತಂಗಡಿಯ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಸೇರಿ ಮುಳಿಯ ಸಹಭಾಗಿತ್ವದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸೋಣ, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಶಾಲಾ ಕಾಲೇಜು ಮತ್ತು ಸಂಘಟನೆಗಳ ಸಹಭಾಗಿತ್ವದಲ್ಲಿ 10 ಸಾವಿರಕ್ಕೂ ಹೆಚ್ಚು ಸೀಡ್ ಬಾಲ್ ಗಳನ್ನು ಹಾಕುವುದು, ಅಂತರ್ಜಾಲ ಅಭಿವೃದ್ಧಿಗಾಗಿ ಕೆರೆಕಟ್ಟೆಗಳ, ಮಣ್ಣಿನ ಕಟ್ಟಡಗಳ ನಿರ್ಮಾಣ , ಸ್ವಚ್ಛ ಪರಿಸರಕ್ಕಾಗಿ ಸ್ವಚ್ಛ ಬೆಳ್ತಂಗಡಿ ಕಾರ್ಯಕ್ರಮ ಹಮ್ಮಿಕೊಳ್ಳವುದಾಗಿ ತಿಳಿಸಿದರು. ಹಾಗೆಯೇ ಬೆಳ್ತಂಗಡಿ ಗಾನ ಕೋಗಿಲೆ ಎಂಬ ಹವ್ಯಾಸಿ ಹಾಡುಗಾರರನ್ನು ಹಳ್ಳಿ ಹಳ್ಳಿಗಳಲ್ಲಿ ಗುರುತಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಮುಳಿಯ ಜ್ಯುವೆಲ್ಲರ್‍ಸ್ ಸ್ಥಾಪಕ ಶ್ಯಾಮ್‌ಭಟ್ ಮುಳಿಯ, ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ, ಕಟ್ಟಡದ ಮಾಲಕ ರಾಗ್ನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಹಕರು ಅನೇಕ ಸಲಹೆ ಸೂಚನೆಗಳನ್ನು ನೀಡಿ ಬಂಗಾರದ ಗುಣಮಟ್ಟ ಹಾಗೂ ಉತ್ತಮ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಖಾ ಪ್ರಬಂಧಕ  ಪ್ರವೀಣ್ ವಂದಿಸಿ, ವೇಣುಗೋಪಾಲ್  ಶರ್ಮ ಕಾರ್‍ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.