ಸುರ್ಯದಲ್ಲಿ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸುರ್ಯ: ಶ್ರೀ ಸದಾಶಿವ ರುದ್ರ ದೇವಸ್ಥಾನದ ‘ಅನಂತ ರತ್ನ ಸಭಾ ಭವನ’ದಲ್ಲಿ ಜೂ.21 ರಂದು 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ವೇದಿಕೆಯಲ್ಲಿ ಸುರ್ಯ  ಶ್ರೀ ಸದಾಶಿವ ರುದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು, ಅಭಿವೃದ್ದಿ ಮಂಡಳಿ  ಅಧ್ಯಕ್ಷ  ಬಿ.ರಾಜಶೇಖರ ಅಜ್ರಿ, ರೋಟರಿ ಕ್ಲಬ್ ಕಾರ್ಯದರ್ಶಿ ಮತ್ತು ನಾವೂರ ‘ಆರೋಗ್ಯ’ ಕ್ಲಿನಿಕ್ ವೈದ್ಯ  ಡಾ। ಪ್ರದೀಪ್, ಯೋಗ ತರಬೇತುದಾರರಾದ ಡಾ.ತೇಜಸ್ವಿನಿ ಉಪಸ್ಥಿತರಿದ್ದರು. ಬೆಳ್ತಂಗಡಿ ಸಿ.ಎ ಬ್ಯಾಂಕ್‌ನ ಅಧ್ಯಕ್ಷ  ಮುನಿರಾಜ ಅಜ್ರಿ ನಿರೂಪಿಸಿದರು.

ಯೋಗ ದಿನಾಚರಣೆಯ ಅಂಗವಾಗಿ ನಡ ಗ್ರಾಮದ ಸಾರ್ವಜನಿಕರಿಗೆ ಯೋಗದ ಬಗ್ಗೆ ಮಾಹಿತಿ, ಮಾರ್ಗದರ್ಶನ, ತರಬೇತಿ ನೀಡುವ ಮೂಲಕ ಆರೋಗ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಉಚಿತವಾಗಿ ಯೋಗ ಶಿಬಿರವನ್ನು ಉಜಿರೆ ಎಸ್  ಡಿ ಎಂ ಆಸ್ಪತ್ರೆ ಹಾಗೂ ಕಕ್ಕಿಂಜೆಯ ಕೃಷ್ಣ ಕ್ಲಿನಿಕ್‌ನ ವೈದ್ಯೆ  ಡಾ।ತೇಜಸ್ವಿನಿ ಬಿ.ಎನ್.ವೈ.ಎಸ್ ಇವರ ಮಾರ್ಗದರ್ಶನದಲ್ಲಿ ಜೂ.20 ರಿಂದ30 ರವರೆಗೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.