ಮಲೆಬೆಟ್ಟು ಶ್ರೀವನದುರ್ಗಾ ದೇವಾಲಯ: ನೂತನ ಧ್ವಜಸ್ತಂಭದ ಮೆರವಣಿಗೆ

ಕೊಯ್ಯೂರು : ಇಲ್ಲಿಯ ಮಲೆಬೆಟ್ಟು -ಬದಿನಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಧ್ವಜ ಸ್ತಂಭ ಪ್ರತಿಷ್ಠೆಯ ಪ್ರಯುಕ್ತ ಮರಕುಡಿಯುವ ಮುಹೂರ್ತವು ಕೊಯ್ಯೂರು ಶ್ರೀನಂದ ಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಅಪಾರ ಸಂಖ್ಯೆಯ ಭಕ್ತ ವೃಂದ, ಊರ-ಪರವೂರ ದಾನಿಗಳ ಉಪಸ್ಥಿತಿಯಲ್ಲಿ  ವೈಭವದಿಂದ  ಇತ್ತೀಚೆಗೆ ನೆರೆವೇರಿತು.
ಶ್ರೀ ಕ್ಷೇತ್ರದಲ್ಲಿ ಭರದಿಂದ ನಡೆಯುತ್ತಿರುವ ಜೀರ್ಣೋದ್ಧಾರದ ಕೆಲಸಗಳು ತೀರ್ಥಕೆರೆ ಕೆಲಸಗಳು ಮುಗಿಯುವ ಹಂತದಲ್ಲಿದ್ದು, ನೆಲಕ್ಕೆ ಇಂಟರ್‌ಲಾಕ್ ಅಳವಡಿಸುವುದು, ಧ್ವಜಸ್ತಂಭವು ಕೂಡ ಜೀರ್ಣೋದ್ಧಾರ ಭಾಗವಾಗಿದೆ. ಎಲ್ಲಾ ಜೀರ್ಣೋದ್ಧಾರ ನಡೆದು 2020ರ ಜನವರಿ ತಿಂಗಳಲ್ಲಿ ಶ್ರೀ ದೇವಿಯ ಅಷ್ಠಬಂಧ ಬ್ರಹ್ಮಕಲಶೋತ್ಸವವು ನಡೆಯಲಿದೆ ಎಂದು ಆಡಳಿತ ಸಮಿತಿಯ ಅಧ್ಯಕ್ಷ ಕಾಂತಾಜೆ ಈಶ್ವರ ಭಟ್ ಮಾಧ್ಯಮಕ್ಕೆ ವಿವರಿಸಿದರು.
ಅಂದು ಬೆಳಿಗ್ಗೆ ಮರಕಡಿಯುವ ಮುಹೂರ್ತ ಮಲೆಬೆಟ್ಟು ಭಂಡಾರಿ ಕೋಡಿಯಲ್ಲಿ ನಡೆದು, ನಂತರ ಧ್ವಜಸ್ತಂಭದ ಮರವನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ದೇವಾಲಯದಲ್ಲಿ 2020ರ ಬ್ರಹ್ಮಕಲಶೋತ್ಸವದ ಸಮಲೋಚನಾ ಸಭೆ ಜರಗಿತು. ಶ್ರೀ ದೇವರಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಜೀರ್ಣೋದ್ಧಾರ ಮಂಡಳಿ ಹಾಗೂ ಊರ-ಪರವೂರ ಭಕ್ತಾಧಿಗಳು, ಕೊಡುಗೈ ದಾನಿಗಳು ಸುತ್ತಮುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪುಣ್ಯಕಾರ್ಯದಲ್ಲಿ ಪಾಲ್ಗೊಂಡರು. ಆಡಳಿತ ಮಂಡಳಿಯ ಅಧ್ಯಕ್ಷ ಕಾಂತಾಜೆ ಈಶ್ವರ ಭಟ್ಟರು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.