ನಿಡಿಗಲ್ ಪೇಟೆಯ ಬೃಹದಾಕಾರದ ಮರಕ್ಕೆ ಮುಕ್ತಿ

Advt_NewsUnder_1
Advt_NewsUnder_1
Advt_NewsUnder_1

ಕಲ್ಮಂಜ: ಕಲ್ಮಂಜ ಅಂಚೆಕಛೇರಿ ಬಳಿ ರಸ್ತೆ ತಿರುವಿನಲ್ಲಿದ್ದ ಅಪಾಯಕಾರಿ ಬೃಹದಾಕಾರದ ಮರವನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆ ಮುಂದಡಿಯಿಟ್ಟಿದೆ. ನಿಡಿಗಲ್ ಪೇಟೆಯ ರಾಷ್ಟ್ರೀಯ ಹೆದ್ದಾರಿಗೆ ತಾಗಿ, ಅಕ್ಕ ಪಕ್ಕದಲ್ಲಿ ಮನೆಗಳು, ವ್ಯಾಪಾರ ಮಳಿಗೆ, ಟೈಲರಿಂಗ್ ಶಾಪ್, ಅಂಚೆ ಕಛೇರಿಗಳಿದ್ದ ಪ್ರದೇಶ, ಅಲ್ಲಿನ ನಿವಾಸಿಗಳು ಮಳೆಗಾಲ ಪ್ರಾರಂಭಗೊಂಡ ನಂತರ ಈ ಮರದ ಸಂಭಾವ್ಯ ಅಪಾಯಕ್ಕೆ ಹೆದರಿ ರಾತ್ರಿ ನಿದ್ದೆ ಮಾಡದ ಸ್ಥಿತಿ ನಿರ್ಮಾಣವಾಗಿತ್ತು. ಬೃಹದಾಕಾರದ ಒಣಗಿದ ಮರ ಯಾವ ಸಮಯದಲ್ಲೂ ಅಪಾಯ ತರುತ್ತದೆ ಎಂಬ ಭಯದಲ್ಲಿ ನಿವಾಸಿಗಳಿದ್ದರು.
ಪಕ್ಕದ ವ್ಯಾಪಾರಿ, ಸುದ್ದಿಬಿಡುಗಡೆ ಪ್ರತಿನಿಧಿ ದಿವಾಕರ ಗೌಡರು ಸಂಬಂಧಿಸಿದ ಅರಣ್ಯಾಧಿಕಾರಿಗೆ ಮರ ಕಡಿಯುವುದಕ್ಕಾಗಿ ಮನವಿ ನೀಡಿದ್ದರೂ. ಪ್ರಯೋಜನಕ್ಕೆ ಬರಲಿಲ್ಲ. ಪತ್ರಿಕೆಗಳಲ್ಲಿ ಅಪಾಯದ ಮರದ ವರದಿ ಪ್ರಕಟಣೆಗೊಂಡಿತ್ತು. ನಂತರ ದಿವಾಕರ ಗೌಡ ಮತ್ತು ಊರವರು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಮನವಿ ಮಾಡಿದ್ದರು. ಕಡೆಗೂ ಜೂ.19 ರಂದು ಅರಣ್ಯ ಇಲಾಖೆ, ಮೆಸ್ಕಾಂನವರ ಸಹಕಾರದೊಂದಿಗೆ ಮರ ತೆರವು ಕಾರ್ಯ ಕೈಗೊಂಡು ಪರಿಸರದ ನಿವಾಸಿಗಳು ಇಂದಿನಿಂದ ನಿಟ್ಟುಸಿರು ಬಿಡುವಂತಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.