HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಖ್ಯಾತ ವೈದ್ಯ  ಡಾ| ಸದಾನಂದ ಪೂಜಾರಿಯವರಿಗೆ ಸಾಮಾಜಿಕ ಸೇವಾ ಪುರಸ್ಕಾರ ಪ್ರಶಸ್ತಿ

ಬೆಳ್ತಂಗಡಿ :  ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಮಂಗಳೂರು ನಗರದ ಪುರಭವನದಲ್ಲಿ ಅಯೋಜಿಸಿದ ಸಾಂಸ್ಕೃತಿಕ ವೈಭವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿ ಇವರನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಸಾಮಾಜಿಕ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಉಪಕುಲಪತಿ ಪ್ರೋ. ಸತೀಶ್ ಭಂಡಾರಿ, ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಕಾರ್ಯಕ್ರಮ ಅಯೋಜಕ ಗಂಗಾಧರ ಗಾಂಧಿ ಉಪಸ್ಥಿತರಿದ್ದರು.
ಇವರು ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮ ಅಂಗಡಿಬೆಟ್ಟು ಮಾಯಿಲಪ್ಪ ಮತ್ತು ರೇವತಿ ದಂಪತಿಯ ಪುತ್ರ, ಪ್ರಸ್ತುತ ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಹಾಗೂ ಜ್ಯೋತಿ ಡಯಾಗ್ನಾಸ್ಟಿಕ್ ಸೆಂಟರ್, ಎಸ್.ಸಿ.ಎಸ್ ಆಸ್ಪತ್ರೆ, ಜಯಶ್ರೀ ನರ್ಸಿಂಗ್ ಹೋಮ್, ಅಥೆನಾ ಆಸ್ಪತ್ರೆ ಇಲ್ಲಿ ಸಂದರ್ಶಕ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರು ರೋಟರಿ ಸದಸ್ಯರಾಗಿರುತ್ತರೆ.
ಇವರ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಜೆಸಿಐ ಸೇರಿದಂತೆ ಹತ್ತು ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಹಾಗೂ ಇವರು ಮೂತ್ರರೋಗಕ್ಕೆ ಸಂಬಂಧಿಸಿದಂತೆ ಅನೇಕ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ನಡೆಸಿ, ಜನಮನ್ನಣೆಗೆ ಪಾತ್ರರಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.