HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕರಾಟೆ: ಎ ಗ್ರೇಡ್ ತೀರ್ಪುಗಾರರಾಗಿ ಅಬ್ದುಲ್ ರಹಿಮಾನ್ ಉಜಿರೆ

ಉಜಿರೆ: ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ರೆಫರಿ ಪರೀಕ್ಷೆಯಲ್ಲಿ ಕರಾಟೆ ಶಿಕ್ಷಕ ಮತ್ತು ತೀರ್ಪುಗಾರ ಸೆನ್ಸಾಯಿ ಅಬ್ದುಲ್ ರೆಹಮಾನ್ ಉಜಿರೆ ಇವರು ತೇರ್ಗಡೆಗೊಂಡು ಎ ಗ್ರೇಡ್ ರೆಫರಿಯಾಗಿ ನೇಮಕಗೊಂಡಿದ್ದಾರೆ.
ಈ ಪರೀಕ್ಷೆಯನ್ನು ವರ್‍ಲ್ಡ್ ಕರಾಟೆ ಫೆಡರೇಷನ್ (ಡಬ್ಲ್ಯು.ಕೆ.ಎಫ್) ರೆಫರಿ ಮತ್ತು ರೆಫರಿ ಕಮಿಷನ್ ಸದಸ್ಯ ಡೊಮಿನಿಕ್ ಸೇವಿಯೋ ಅವರು ನಡೆಸಿದ್ದರು.
ಈ ಮೂಲಕ ಸೆನ್ಸಾಯಿ ಅಬ್ದುಲ್ ರೆಹಮಾನ್ ಅವರು ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಕೂಟಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆದುಕೊಂಡಂತಾಗಿದೆ.
ಪ್ರಸಕ್ತ ಕರಾಟೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಕರ್ನಾಟಕ ಕರಾಟೆ ಡು ಸ್ಪೋರ್ಟ್ಸ್ ಅಸೋಸಿಯೇಷನ್ ಇದರ ಪ್ರ. ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.