ಗುರುವಾಯನಕೆರೆ ಇಹ್ಯಾವುಲ್ ಇಸ್ಲಾಂ ಮದ್ರಸ ಪ್ರಾರಂಭೋತ್ಸವ

ಫತ್ ಹೇ ಮುಬಾರಕ್2019

ಗುರುವಾಯನಕೆರೆ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡು ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಗುರುವಾಯನಕೆರೆ ಇಹ್ಯಾವುಲ್ ಇಸ್ಲಾಂ ಮದ್ರಸ ಪ್ರಾರಂಭೋತ್ಸವ- “ಫತ್ ಹೇ ಮುಬಾರಕ್-2019” ಕಾರ್ಯಕ್ರಮವು  ಜೂ.13 ರಂದು ಜಮಾಅತ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಅಧ್ಯಾಪಕ ಮುಹಮ್ಮದ್ ಶರೀಫ್ ಝುಹ್ರಿ ಉದ್ಘಾಟಿಸಿದರು . ಮದ್ರಸದ ನೂತನ ಪ್ರಾಂಶುಪಾಲ  ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ರವರು ಸ್ವಾಗತ ಭಾಷಣ ಮಾಡಿ, ಫತ್’ಹೇ ಮುಬಾರಕ್ ಹಾಗೂ ಮದ್ರಸ ಶಿಕ್ಷಣದ ಆಧುನೀಕರಣ ಬಗ್ಗೆ ಮಾಹಿತಿ ನೀಡಿದರು. ಜಮಾಅತ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಶುಭ ಹಾರೈಸಿದರು. ಅಧ್ಯಾಪಕ ಅಬ್ದುನ್ನಾಸಿರ್ ಮರ್ಝೂಖಿ ಖಿರಾಅತ್ ಪಡಿಸಿದರು.

ವೇದಿಕೆಯಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್,ಉಪಾಧ್ಯಕ್ಷ  ಅಬ್ದುಲ್ ಲತೀಫ್ ಹಾಜಿ,ಉಸ್ಮಾನ್ ಹಾಜಿ , ಜಮಾಅತ್ ಆಡಳಿತ ಸಮಿತಿ ಮತ್ತು ದರ್ಗಾ ಸಮಿತಿ ನಾಯಕರು, ರಕ್ಷಕರು ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.