ಕಳಿಯ: ಇಲ್ಲಿಯ ಬದಿನಡೆ, ಮಂಜಲಡ್ಕ ಕಲ್ಕುಡ ಮಾಡ ದೈವಗಳ ಸನ್ನಿಧಿಯಲ್ಲಿ ಕಾರ್ಕಳ ಕೆಮ್ಮಣ್ಣು ವಿದ್ವಾನ್ ಪ್ರಸನ್ನ ಆಚಾರ್ಯ ನೇತೃತ್ವದಲ್ಲಿ ಆರೂಡ ಪ್ರಶ್ನೆ ಜೂ.14 ರಂದು ನಡೆಯಿತು.
ಸುಮಾರು ವರ್ಷಗಳ ಇತಿಹಾಸವಿರುವ ದೈವಸ್ಥಾನಗಳಾದ ಬದಿನಡೆ ದೈವಸ್ಥಾನದಲ್ಲಿ ಆಯಿವೇರ್ ಉಳ್ಳಾಕುಲು, ಉಳ್ಳಾಲ್ತಿ, ಬಂಗಾಡಿ ದೈವ ಮತ್ತು ಮಂಜಲಡ್ಕ ದೈವಸ್ಥಾನದಲ್ಲಿ ಕೊಡಮಣಿತ್ತಾಯ, ಕಲ್ಕುಡ- ಕಲ್ಲುರ್ಟಿ, ಪಿಲಿಚಾಮುಂಡಿ ದೈವಗಳ ಮೂಲಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ, ಕಳಿಯ ಬೀಡು ಮತ್ತು ಸ್ಥಳೀಯ ಗ್ರಾಮಸ್ಥರು ಮುಂದಾಗಿದ್ದು, ಊರಿನ ಹಿರಿಯರು, ಪ್ರಮುಖರ ಉಪಸ್ಥಿತಿಯಲ್ಲಿ ದೈವಗಳ ಜೀರ್ಣೋದ್ಧಾರಕ್ಕೆ ಎಲ್ಲಾ ಪರಿಹಾರ ಮಾಡುವ ಕುರಿತು ಪ್ರಶ್ನೆ- ಚರ್ಚೆಗಳು ನಡೆಯಿತು.